ಹೆರಿಗೆ ರಜೆ ಕುರಿತಂತೆ ಕೇರಳ ವಿಶ್ವವಿದ್ಯಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿನಿಯರು ಗರಿಷ್ಠ ಆರು ತಿಂಗಳವರೆಗೆ ಹೆರಿಗೆ ರಜೆ ಪಡೆಯಲು ಅರ್ಹರು ಎಂದು ಘೋಷಣೆ ಮಾಡಲಾಗಿದೆ.
ಹೆರಿಗೆ ರಜೆ ತೆಗೆದುಕೊಳ್ಳುವ ವಿದ್ಯಾರ್ಥಿನಿಯರು ಆರು ತಿಂಗಳ ಬಳಿಕ ಪುನಃ ಅಡ್ಮಿಶನ್ ತೆಗೆದುಕೊಳ್ಳದೆ ತರಗತಿಗೆ ಹಾಜರಾಗುವ ಮೂಲಕ ನೇರವಾಗಿ ಅಧ್ಯಯನವನ್ನು ಮುಂದುವರಿಸಬಹುದಾಗಿದೆ.
ಆದರೆ ಅಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಅಗತ್ಯವಿರುವ ವೈದ್ಯಕೀಯ ದಾಖಲೆಗಳನ್ನು ಪ್ರಾಂಶುಪಾಲರಿಗೆ ಸಲ್ಲಿಸಬೇಕಿದ್ದು, ಅದನ್ನು ಪರಿಶೀಲಿಸಿ ವಿಶ್ವವಿದ್ಯಾಲಯದ ಅನುಮತಿ ದೊರೆತ ಬಳಿಕವೇ ತರಗತಿಗೆ ಪ್ರವೇಶ ಪಡೆಯುವ ದಿನಾಂಕ ತಿಳಿಸಲಾಗುತ್ತದೆ.