ಬೇಸಿಗೆಯಲ್ಲಿ ಮೈ ಬೆವರಿನ ವಾಸನೆ ಹೆಚ್ಚಾಗಿರುವುದರಿಂದ ಹೆಚ್ಚಿನವರು ಡಿಯೋಡರೆಂಟ್ ಮೊರೆ ಹೋಗ್ತಾರೆ. ಆದರೆ ಡಿಯೋಡರೆಂಟ್ ಬದಲು ಮನೆಯಲ್ಲಿರುವ ಪದಾರ್ಥಗಳನ್ನೇ ಡಿಯೋ ರೀತಿಯಲ್ಲಿ ಬಳಸಬಹುದು.
* ಪ್ರತಿ ದಿನ ಸ್ನಾನ ಮಾಡುವ ನೀರಿಗೆ ನಿಂಬೆ ರಸವನ್ನು ಮಿಕ್ಸ್ ಮಾಡಿ. ನಿಂಬೆ ರಸ ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದರಿಂದ ದುರ್ಗಂಧ ಕಡಿಮೆಯಾಗಿ ಇಡೀ ದಿನ ಫ್ರೆಶ್ ಆಗಿರುವಂತೆ ಮಾಡುತ್ತದೆ.
* ಡಿಯೋ ಬದಲು ಹ್ಯಾಂಡ್ ಸ್ಯಾನಿಟೈಜರ್ ಬಳಸಬಹುದು. ಇದು ದುರ್ಗಂಧವನ್ನುಂಟು ಮಾಡುವ ಬ್ಯಾಕ್ಟೀರಿಯಾದಿಂದ ಮುಕ್ತಿ ನೀಡುತ್ತದೆ.
* ಎರಡು ಚಮಚ ಬೇಕಿಂಗ್ ಸೋಡಾಗೆ ಜೋಳದ ಪುಡಿಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ಅಂಡರ್ ಆರ್ಮ್ ಗೆ ಹಚ್ಚುವುದರಿಂದ ದುರ್ಗಂಧ ದೂರವಾಗುತ್ತದೆ.