ಶಾಲಾ ಶುಲ್ಕ ಕಟ್ಟದ್ಧಕ್ಕೆ 16 ವಿದ್ಯಾರ್ಥಿಗಳಿಗೆ ಪರೀಕ್ಷೆ ನಿರಾಕರಿಸಿರುವ ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ಬೋಗಾದಿ 2ನೇ ಹಂತದಲ್ಲಿರುವ ರಾಯಲ್ ಕಾನ್ ಕಾರ್ಡ್ ಶಾಲಾ ಆಡಳಿತ ಮಂಡಳಿ ಇಂತದ್ದೊಂದು ಅವಿವೇಕದ ತೀರ್ಮಾನ ಕೈಗೊಂಡಿದೆ.
ಅಲ್ಲದೆ ಪ್ರಾಂಶುಪಾಲರು ಶಾಲಾ ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಮನಬಂದಂತೆ ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಮ್ಯಾನೇಜರ್ ಹರೀಶ್ ಗೆ ಪೋಷಕರು ಹಿಗ್ಗಾಮುಗ್ಗಾ ಥಳಿಸಿದ್ದು, ಸ್ಥಳಕ್ಕೆ ಬಂದ ಸರಸ್ವತಿಪುರಂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.