ನೋಡೋದಕ್ಕೆ ಸಖತ್ ಸೈಲೆಂಟ್. ಆದರೆ ಒಮ್ಮೆ ಎದುರಿಗೆ ಇದ್ದವರ ಮೇಲೆ ದಾಳಿ ಮಾಡ್ತು ಅಂದ್ರೆ ಖೇಲ್ ಖತಂ. ಯಾರ ಬಗ್ಗೆ ಹೇಳ್ತಿದ್ದೇವೆ ಅಂತ ಯೋಚಿಸ್ತಿದ್ದಿರಾ? ನಾವು ಹೇಳ್ತಿರೋದು ಕಾಡಿನಲ್ಲಿರೋ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿರೋ ಚಿರತೆ ಬಗ್ಗೆ. ಇದೇ ಚಿರತೆಯ ವಿಡಿಯೋ ಒಂದು ಇತ್ತಿಚೆಗೆ ವೈರಲ್ ಆಗಿದೆ.
ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಶಾಜ್ ಜಂಗ್ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿರುವ ದೃಶ್ಯ ಇದು. ಇದನ್ನ ಇವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡ್ಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕ್ಲಿಯೊ ಎಂಬ ಹೆಸರಿನ ಚಿರತೆಯೊಂದು ನಿಧಾನಕ್ಕೆ ಬರುವುದನ್ನ ನೋಡಬಹುದು. ಅದರ ಜೊತೆ ಜೊತೆಗೆ ಇನ್ನೊಂದು ಕಪ್ಪು ಬಣ್ಣದ ಸಯಾ ಅನ್ನೊ ಹೆಸರಿನ ಬ್ಲ್ಯಾಕ್ ಪ್ಯಾಂಥರ್ ಕೂಡಾ ಹೆಜ್ಜೆ ಹಾಕುತ್ತ ಬರುತ್ತೆ. ಎತ್ತರ ಹಾಗೂ ಆಕಾರದಲ್ಲಿ ಎರಡೂ ಚಿರತೆಗಳು ಒಂದೇ ರೀತಿ ಕಾಣಿಸುತ್ತೆ. ನೋಡುವುದಕ್ಕೆ ಸಯಾ ಬ್ಲ್ಯಾಕ್ ಪ್ಯಾಂಥರ್, ಇದು ಕ್ಲಿಯೋ ಚಿರತೆಯ ನೆರಳಿನಂತೆ ಭಾಸವಾಗುತ್ತೆ.
ಈ ವಿಡಿಯೋವನ್ನ ಶಾಜ್ ಜಂಗ್ ಇವರು ಬಂಡೀಪುರ ಹಾಗೂ ರಾಷ್ಟ್ರೀಯ ಉದ್ಯಾನವನಗಳಲ್ಲಿ, ತಮ್ಮ ಕ್ಯಾಮರಾದಲ್ಲಿ ಸರೆಹಿಡಿದಿದ್ದಾರೆ. ಸೊಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಇದಕ್ಕೆ ಶೀರ್ಷಿಕೆ ’ ನಿಮ್ಮ ನೆರಳೇ ನಿಮಗೆ ಉತ್ತಮ ಸ್ನೇಹಿತ ’ವಿಶ್ವ ವನ್ಯಜೀವಿ ದಿನದಂದು ನಾನು ಸೆರೆ ಹಿಡಿದ ಅತ್ಯಂತ ಅದ್ಭುತ ಕ್ಷಣ. ಇದು ಸಯಾ ಮತ್ತು ಕ್ಲಿಯೋ ಸುಂದರ ಜಗತ್ತಿನ ಚಿತ್ರಣ’ ಎಂದು ಬರೆದುಕೊಂಡಿದ್ದಾರೆ.
ಮಾರ್ಚ್ 3ರಂದು ಪೋಸ್ಟ್ ಮಾಡಲಾಗಿರುವ ಈ ವಿಡಿಯೋವನ್ನ ಈಗಾಗಲೇ 3.9 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಮಂತ್ರಮುಗ್ಧರಾಗಿ ಹೋಗಿದ್ದಾರೆ. ಒಬ್ಬರು ’ಅದ್ಭುತವಾಗಿದೆ ಈ ಶಕ್ತಿಶಾಲಿ ಜೋಡಿ ಎಂದು ಹೇಳಿದ್ಧಾರೆ. ಇನ್ನೊಬ್ಬರು ’ ಕಲ್ಪನೆಗೂ ಮೀರಿದ್ದ ಫೋಟೋವನ್ನ ಕ್ಲಿಕ್ ಮಾಡಿದ ಶಾಜ್ ಜಂಗ್ ಭಾಯ್ ಹ್ಯಾಟ್ಸ್ ಆಫ್’ ಎಂದು ಹೇಳಿದ್ದಾರೆ. ವನ್ಯಜೀವಿ ಛಾಯಾಗ್ರಾಹಕ ಶಾಜ್ ಜಂಗ್ ಈ ಹಿಂದೆಯೂ ಕಾಡು ಪ್ರಾಣಿಗಳ ಅದ್ಭುತ ಲೋಕವನ್ನ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.
https://www.youtube.com/watch?v=ecbXhvEJ7YQ&feature=youtu.be