ತೆಲಂಗಾಣದಲ್ಲಿ 70 ವರ್ಷದ ಮಹಿಳೆ ಮಾರ್ಚ್ 3 ರಂದು 20 ಕ್ಕೂ ಹೆಚ್ಚು ಮಂಗಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ಚಟಾರಬೋಯಿನಾ ನರಸವ್ವ ಎಂದು ಗುರುತಿಸಲಾಗಿದೆ.
ಮಹಿಳೆ ತನ್ನ ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದಾಗ ಆಕೆಯ ಮೇಲೆ ಕೋತಿ ದಾಳಿ ಮಾಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರಸವ್ವ ಶನಿವಾರ ಮೃತಪಟ್ಟಿದ್ದಾರೆ.
70 ವರ್ಷದ ಮಹಿಳೆಯ ಎದೆ, ಬೆನ್ನು ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು.
ವರದಿಗಳ ಪ್ರಕಾರ ಆ ಸಮಯದಲ್ಲಿ ಮಗಳು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೊರಗೆ ಹೋಗಿದ್ದರಿಂದ ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು. ಮಂಗಗಳ ಭೀತಿಯಿಂದ ಕೋತಿಗಳು ಹೋಗುವವರೆಗೆ ನರಸವ್ವನ ಮನೆಯ ನೆರೆಹೊರೆಯವರು ತಮ್ಮ ಮನೆ ಬಾಗಿಲುಗಳನ್ನು ಬಂದ್ ಮಾಡಿದ್ದರು.