HomeEntertainmentಬೆಂಕಿಯಿಂದ ಆವರಿಸಿದ ಬಟ್ಟೆ ತೊಟ್ಟು ಫ್ಯಾಷನ್‌ ಷೋಗೆ ಬಂದ ಮಾಡೆಲ್....!‌

ಬೆಂಕಿಯಿಂದ ಆವರಿಸಿದ ಬಟ್ಟೆ ತೊಟ್ಟು ಫ್ಯಾಷನ್‌ ಷೋಗೆ ಬಂದ ಮಾಡೆಲ್….!‌

ಇಂದು ಫ್ಯಾಷನ್‌ ಪರಿಕಲ್ಪನೆ ಬದಲಾಗಿದೆ. ಹೊಸ ಹೊಸ, ಚಿತ್ರ-ವಿಚಿತ್ರ ಮಾದರಿಯಲ್ಲಿ ಫ್ಯಾಷನ್‌ಗಳು ಕಾಣಿಸಿಕೊಳ್ಳುತ್ತಿದ್ದು, ಅಂಥದ್ದೇ ಒಂದು ವಿಚಿತ್ರ ಫ್ಯಾಷನ್‌ ಷೋ ಇದೀಗ ವೈರಲ್‌ ಆಗುತ್ತಿದೆ.

ಪ್ಯಾರೀಸ್‌ ಫ್ಯಾಷನ್‌ ವೀಕ್‌ ಷೋನಲ್ಲಿ ರೂಪದರ್ಶಿಯೊಬ್ಬರು ಸಂಪೂರ್ಣವಾಗಿ ಬೆಂಕಿಯಲ್ಲಿ ಆವರಿಸಿರುವ ಉಡುಪನ್ನು ಧರಿಸಿ ರ್‍ಯಾಂಪ್‌ವಾಕ್‌ ಮಾಡಿದ್ದಾರೆ.

ಇದು ಪ್ರೇಕ್ಷಕರನ್ನು ಬಹಳ ರಂಜಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಇದನ್ನು ಪೋಸ್ಟ್ ಮಾಡಿದ ನಂತರ, ವೀಡಿಯೊ ತ್ವರಿತವಾಗಿ ವೈರಲ್ ಆಗಿದೆ. ಒಂದು ದಿನದಲ್ಲಿಯೇ 1 ಮಿಲಿಯನ್ ವೀಕ್ಷಣೆ ಗಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಲಿಯಟ್ ಎಮಿಲ್ ಅವರ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಇದು ಕಂಡು ಬಂದಿದೆ. ರೂಪದರ್ಶಿಯು ಹೆಡ್ ಜಾಕೆಟ್, ಬ್ಯಾಗಿ ಪ್ಯಾಂಟ್ ಮತ್ತು ಬೂಟುಗಳನ್ನು ಧರಿಸಿದ್ದರು. ಮುಖವನ್ನು ಸಂಪೂರ್ಣವಾಗಿ ಮರೆಮಾಡಲಾಗಿದ್ದರೆ ಉಡುಪಿನ ಎಲ್ಲಾ ಭಾಗಗಳಿಂದ ಜ್ವಾಲೆಗಳು ಬರುತ್ತಿರುವುದನ್ನು ನೋಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular