ಕಾಡಿನ ರಾಜ ಸಿಂಹ ಒಮ್ಮೆ ಅಬ್ಬರಿಸಿ ಬೊಬ್ಬಿರಿದು ಬಿಟ್ಟರೆ ಕಥೆ ಮುಗೀತು. ಎದುರಿಗೆ ಯಾವ ಪ್ರಾಣಿ ಇದ್ದರೂ, ಅದಕ್ಕೆ ಉಳಿಗಾಲ ಇಲ್ಲ ಅಂತಾನೆ ಅರ್ಥ.
ಸಿಂಹವೇ ಇಷ್ಟು ಡೆಂಜರ್ ಆಗಿರುವಾಗ ಇನ್ನೂ ಸಿಂಹಿಣಿಯಂತೂ ಅದಕ್ಕಿಂತಲೂ ಡೆಂಜರಸ್. ಇದೇ ಕಾರಣಕ್ಕೆ ಯಾವ ಪ್ರಾಣಿಗಳು ಹತ್ತಿರಕ್ಕೆ ಹೋಗೋದಿರಲಿ, ದೂರದಿಂದಲೂ ಕೆಣಕೋ ಧೈರ್ಯ ಮಾಡೋಲ್ಲ. ಆದರೆ ಈಗ ಹಿಪ್ಪೋ (ಫೇಂಡಾಮೃಗ) ವೊಂದು ಸಿಂಹಿಣಿಯ ಬಳಿ ಹೋಗೋದಲ್ಲದೇ, ಅದನ್ನ ಹೆದರಿಸಿ ಓಡಿಸಿಬಿಟ್ಟಿದೆ.
ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋ ನೋಡಿದ್ರೆ ನೀವು ಕೂಡಾ ಶಾಕ್ ಆಗ್ಬೀಡ್ತೀರಾ…! ಲೇಟೆಸ್ಟ್ ಕೂಕರ್ ಅನ್ನೋ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ವಿಡಿಯೋ ಒಂದನ್ನ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಶೀರ್ಷಿಕೆಯಲ್ಲಿ ‘ತನ್ನ ಜಾಗಕ್ಕೆ ಎಂಟ್ರಿ ಕೊಟ್ಟ ಸಿಂಹವನ್ನ ಓಡಿಸಿದ ಹಿಪ್ಪೋ’ ಎಂದು ಬರೆದುಕೊಂಡಿದ್ದಾರೆ.
ಇಲ್ಲಿ ದೈತ್ಯಾಕಾರದ ಹಿಪ್ಪೋ ತನ್ನ ಸಂಗಾತಿಗಳೊಂದಿಗೆ ಕೆರೆಯೊಂದರಲ್ಲಿ ಆಟ ಆಡುತ್ತಿರುತ್ತೆ, ಅದೇ ಸಮಯದಲ್ಲಿ ಸಿಂಹಗಳ ಜೋಡಿಯೊಂದು ಅಲ್ಲಿಗೆ ಬರುತ್ತೆ. ಆಗ ಸಿಂಹಿಣಿ ಆ ಕೆರೆಯ ನೀರನ್ನ ಕುಡಿಯಲು ಮುಂದಾಗುತ್ತೆ. ಆಗ ಹಿಪ್ಪೋ ಆ ಸಿಂಹಿಣಿಯನ್ನ ಗುರಾಯಿಸುತ್ತೆ. ಅಷ್ಟೇ ಅಲ್ಲ, ದಾಳಿ ನಡೆಸಲು ಓಡೋಡಿ ಬರುತ್ತೆ. ಅದನ್ನ ನೋಡಿದಾಕ್ಷಣ ಸಿಂಹಿಣಿ ಬೆಚ್ಚಿಬಿದ್ದು ಓಡಿ ಹೋಗುತ್ತೆ.
ಈ ವಿಡಿಯೋವನ್ನ 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲವರು ಈ ವಿಡಿಯೋ ನೋಡಿ ಕಾಮೆಂಟ್ ಕೂಡಾ ಹಾಕಿದ್ದಾರೆ. ಹಿಪ್ಪೋ ನೋಡಿ ಓಡಿದ ಸಿಂಹ ಎಂದು ಓರ್ವ ಬರೆದಿದ್ದಾರೆ. ಇನ್ನೊರ್ವರು ಸಿಂಹವನ್ನ ಹೆದರಿಸಿ ಪದಕ ಗೆದ್ದ ಘಂಡಾಮೃಗ ಅಂತ ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ಈ ಕಾಡಿನ ರಾಜ ಯಾರು ಈಗ ಗೊತ್ತಾಯ್ತಾ ಅಂತ ಬರೆದಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅನಿಸಿಕೆ ಏನು ? ನೀವೇ ಹೇಳಿ.
https://youtu.be/9RmQ1-kMQCc