ನಿಮ್ಮ ಕಾರಿನ ಇಂಧನ ಟ್ಯಾಂಕ್ ಯಾವ ಬದಿಯಲ್ಲಿದೆ ಎಂಬುದನ್ನು ಕಂಡುಹಿಡಿಯಲು ನೀವು ಬಳಸಬಹುದಾದ ಸುಲಭ ತಂತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಟಿಕ್ಟಾಕ್ ಬಳಕೆದಾರರೊಬ್ಬರು ಇದರ ಟ್ರಿಕ್ ಅನ್ನು ಪ್ರದರ್ಶಿಸಿದ್ದಾರೆ.
ನೀವು ಮಾಡಬೇಕಾಗಿರುವುದು ಇಂಧನ ಗೇಜ್ನಲ್ಲಿ ನಿಮ್ಮ ವಾಹನದ ಸೂಚನಾ ಫಲಕಕ್ಕೆ ಗಮನ ಕೊಡುವುದು ಎಂದಿದ್ದಾರೆ ಇವರು.
“ಗೆಳೆಯರೇ, ಕಾರಿನ ಪೆಟ್ರೋಲ್ ಖಾಲಿಯಾದಾಗ ಈ ಬಾಣವು ಪೆಟ್ರೋಲ್ ಬಾಗಿಲು ಯಾವ ಬದಿಯಲ್ಲಿದೆ ಎಂದು ಹೇಳುತ್ತದೆ ಎಂದು ನಾನು ಕಂಡುಕೊಂಡಾಗ ನನಗೆ ಇಷ್ಟು ವಯಸ್ಸಾಗಿತ್ತು” ಎಂದು ಟಿಕ್ಟಾಕ್ ಬಳಕೆದಾರರು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಪ್ಯಾನೆಲ್ನಲ್ಲಿನ ಪೆಟ್ರೋಲ್ ಪಂಪ್ನ ಐಕಾನ್ ಅನ್ನು ತೋರಿಸಿದ್ದಾರೆ, ಅದರೊಂದಿಗೆ ಸಣ್ಣ ತ್ರಿಕೋನವನ್ನು ಜೋಡಿಸಲಾಗಿದೆ. ಬಾಣದ ದಿಕ್ಕನ್ನು ಅನುಸರಿಸುವುದು ಸರಳ ಟ್ರಿಕ್ ಆಗಿದೆ.
ಅದು ಎಡಕ್ಕೆ ತೋರಿಸುತ್ತಿದ್ದರೆ, ಕಾರಿನ ಪೆಟ್ರೋಲ್ ಟ್ಯಾಂಕ್ ಎಡಭಾಗದಲ್ಲಿದೆ ಎಂದರ್ಥ ಎಂದಿದ್ದಾರೆ. ಇದನ್ನು ನೋಡಿ ಹಲವು ಮಂದಿ ಅಚ್ಚರಿ ಪಟ್ಟಿದ್ದಾರೆ. ನಮಗೆ ಇದು ಗೊತ್ತೇ ಇರಲಿಲ್ಲ.ನಾವೂ ಎಷ್ಟೋ ಸಂದರ್ಭದಲ್ಲಿ ಮುಜುಗರ ಅನುಭವಿಸಿದ್ದು ಉಂಟು ಎಂದು ಕೆಲವರು ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.