ಕತಾರ್ ನಲ್ಲಿ ನಡೆದ 2022ರ ವಿಶ್ವಕಪ್ ವಿಜೇತ ತಂಡವಾದ ಅರ್ಜೆಂಟೈನಾ ಆಟಗಾರರು ಹಾಗೂ ಇತರ ಸಿಬ್ಬಂದಿಗೆ ಬಂಪರ್ ಕೊಡುಗೆ ನೀಡಲಾಗುತ್ತಿದೆ. ಅರ್ಜೆಂಟೈನಾ ತಂಡದ ನಾಯಕ ಲಿಯೋನಲ್ ಮೆಸ್ಸಿ ಪ್ರತಿಯೊಬ್ಬರಿಗೂ 24 ಕ್ಯಾರೆಟ್ ಚಿನ್ನದ ಐ ಫೋನ್ ಗಿಫ್ಟ್ ಆಗಿ ನೀಡಲಿದ್ದಾರೆ.
ಬರೋಬ್ಬರಿ 1.73 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಚಿನ್ನದ ಐಫೋನ್ ಗಳನ್ನು ರೂಪಿಸಲಾಗಿದ್ದು, ಇದರ ಮೇಲೆ ತಂಡದ ಆಟಗಾರನ ಹೆಸರು, ಆತನ ಜರ್ಸಿ ಸಂಖ್ಯೆ ಹಾಗೂ ಅರ್ಜೆಂಟೈನಾದ ಲೋಗೋ ಇರಲಿದೆ. ಈಗಾಗಲೇ ಚಿನ್ನದ ಐಫೋನ್ ಗಳು ಲಿಯೋನೆಲ್ ಮೆಸ್ಸಿ ಮನೆ ತಲುಪಿದೆ ಎಂದು ಹೇಳಲಾಗಿದೆ.
ಫ್ರಾನ್ಸ್ ವಿರುದ್ಧ 4-2 ಗೋಲುಗಳ ಅಂತರದಿಂದ ಜಯ ಸಾಧಿಸಿದ ಅರ್ಜೆಂಟೈನಾ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ. ಲಿಯೋನೆಲ್ ಮೆಸ್ಸಿ ಅವರಿಗೆ ಇದು ಮೊದಲ ವಿಶ್ವಕಪ್ ಆಗಿದೆ. ಹೀಗಾಗಿ ಇದನ್ನು ಸ್ಮರಣೀಯಗೊಳಿಸಲು ಬಯಸಿರುವ ಅವರು ಆಟಗಾರರಿಗೆ ಹಾಗೂ ತಂಡದ ಇತರೆ ಸದಸ್ಯರಿಗೆ ಚಿನ್ನದ ಐಫೋನ್ ನೀಡುತ್ತಿದ್ದಾರೆ.