
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಷಡಕ್ಷರಿ, ಸರ್ಕಾರ ಬರಿ ಭರವಸೆ ನಿಡುವುದರಲ್ಲಿ ಶೀಘ್ರ ಜಾರಿ ಮಾಡ್ತೀವಿ ಎಂಬುದರಲ್ಲೇ ಕಾಲ ಕಳೆಯುತ್ತಿದೆ. ಶೇ.17ರಷ್ಟು ವೇತನ ಹೆಚ್ಚಳ ನಾವು ಒಪ್ಪಲ್ಲ. ಶೇ.30ರಷ್ಟಾದರೂ ಹೆಚ್ಚಳ ಮಾಡಬೇಕು ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಜೊತೆಗಿನ ಸಿಎಂ ಬೊಮ್ಮಾಯಿ ಅವರ ಸಭೆಗೆ ನಮಗೂ ಆಹ್ವಾನ ನೀಡಿದ್ದಾರೆ. ಸಭೆಯಲ್ಲಿ ಏನು ಹೇಳುತ್ತಾರೆ ನೋಡೋಣ. ಮೊದಲು ಆದೇಶ ಹೊರಡಿಸಲಿ ಎಂದರು.

