ಜನರು ಬಣ್ಣಗಳನ್ನು ವಿಭಿನ್ನವಾಗಿ ನೋಡುತ್ತಾರೆ ಎಂಬ ಸಿದ್ಧಾಂತವೊಂದಿದೆ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಹಾಗೂ ಚರ್ಚೆಗೆ ಒಳಗಾಗಿರುವ ಸಿದ್ಧಾಂತವಾಗಿದೆ.
ಈ ಸಿದ್ಧಾಂತಕ್ಕೆ ತಕ್ಕಂತೆ ಈಗ ಟ್ವಿಟರ್ ಬಳಕೆದಾರರು ಉಡುಪಿನ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರ ಬಣ್ಣ ಯಾವುದು ಎಂದು ಗುರುತಿಸುವಂತೆ ಕೇಳಿದ್ದಾರೆ. ಕೆಲವರಿಗೆ ಇದು ಬೇರೆ ಬೇರೆ ರೀತಿಯ ಬಣ್ಣದಂತೆ ಕಾಣುತ್ತಿದೆ. ವಾಸ್ತವವನ್ನು ಮುಂದಿಟ್ಟರೂ ಜನರಲ್ಲಿ ಕುತೂಹಲ ಮೂಡಿದೆ.
ಇದರ ಹಿಂದಿರುವ ವಿಜ್ಞಾನದ ಬಗ್ಗೆ ಹಲವರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಒಬ್ಬೊಬ್ಬರು ಒಂದು ರೀತಿಯ ಬಣ್ಣವನ್ನು ಹೇಳುತ್ತಿದ್ದಾರೆ. ಚಿನ್ನ, ಬಿಳಿ, ನೀಲಿ ಎಂದೆಲ್ಲಾ ಉತ್ತರಗಳು ಬರುತ್ತಿವೆ. ಸೂರ್ಯನ ಬೆಳಕು ಅರ್ಧ ಬಟ್ಟೆಯ ಮೇಲೆ ಬಿದ್ದಿದ್ದು, ಇನ್ನರ್ಧ ಬಟ್ಟೆಯ ಮೇಲೆ ನೆರಳು ಬಂದಿದೆ. ಈ ಹಿನ್ನೆಲೆಯಲ್ಲಿ ಬಟ್ಟೆಯ ನಿಜವಾದ ಬಣ್ಣ ಯಾವುದು ಎಂಬ ಗೊಂದಲ ಮೂಡುತ್ತಿದ್ದು, ಇದು ನಿಜಕ್ಕೂ ಅಚ್ಚರಿಗೆ ತಳ್ಳುತ್ತದೆ.