HomeKarnatakaBIG NEWS: ನಾವು ಅಧಿಕಾರಕ್ಕೆ ಬಂದ್ರೆ 7ನೇ ವೇತನ ಆಯೋಗ ಜಾರಿ: ಡಿ.ಕೆ.ಶಿವಕುಮಾರ್ ಘೋಷಣೆ

BIG NEWS: ನಾವು ಅಧಿಕಾರಕ್ಕೆ ಬಂದ್ರೆ 7ನೇ ವೇತನ ಆಯೋಗ ಜಾರಿ: ಡಿ.ಕೆ.ಶಿವಕುಮಾರ್ ಘೋಷಣೆ

ಹಾಸನ: 7ನೇ ವೇತನ ಆಯೋಗ ಜಾರಿಗಾಗಿ ಸರ್ಕಾರಿ ನೌಕರರ ಮುಷ್ಕರ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗ ಜಾರಿ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಹಾಸನದ ಆಲೂರಿನ ಪಟ್ಟಣದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನಾಳೆಯಿಂದ ಎಲ್ಲಾ ಸರ್ಕಾರಿ ನೌಕರರು ಹೋರಾಟ ಮಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದಾಗ 7ನೇ ವೇತನ ಆಯೋಗ ಜಾರಿ ಮಾಡುತ್ತೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಧಾನಿ ಮೋದಿ, ಅಮಿತ್ ಶಾ ಈಗಾಗಲೇ 7 ಬಾರಿ ಬಂದು ಹೋಗಿದ್ದಾರೆ. ಮಳೆ ಹಾನಿ, ಕೋವಿಡ್ ಸಂಕಷ್ಟ ಇದ್ದಾಗ ಬರಲಿಲ್ಲ. ಈಗ ಚುನಾವಣೆ ಬಂದಿದೆ ಎಂದು ಬರುತ್ತಿದ್ದಾರೆ. ಲಂಚ ಕೊಡದೇ ಸರ್ಕಾರದಲ್ಲಿ ಯಾವುದೇ ಕೆಲಸ ಆಗಲ್ಲ, ಸ್ವಚ್ಛ ಆಡಳಿತ ಕೊಡಲು ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular