ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನಲ್ಲಿ ನಾಯಿಗೆ ವಿಶೇಷ ಸೀಟು: ವಿಡಿಯೋ ವೈರಲ್​

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನ ಮೊದಲ ಆವೃತ್ತಿಯು ಮುಂಬೈನಲ್ಲಿ ಫೆಬ್ರವರಿ 24 ರಿಂದ ಫೆಬ್ರವರಿ 26 ರ ನಡುವೆ ನಡೆಯಿತು. ಈ ಕಾರ್ಯಕ್ರಮವು ಭಾರತದ ಶ್ರೀಮಂತ ಸಂಗೀತ ಮತ್ತು ಸಾಂಸ್ಕೃತಿಕ ಬೇರುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ 10 ಕಲಾವಿದರಿಂದ ಪ್ರದರ್ಶನಗಳನ್ನು ಒಳಗೊಂಡಿತ್ತು.

ಪ್ರದರ್ಶನಗಳ ಜೊತೆಗೆ, ಕಂಪೆನಿಯ ಅಧ್ಯಕ್ಷರ ಗಮನವನ್ನು ಕದ್ದದ್ದು ವಿಶ್ರಾಂತಿ ಪಡೆಯುತ್ತಿರುವ ಸಾಕು ನಾಯಿಯ ಛಾಯಾಚಿತ್ರ. ಭಾನುವಾರ ಸಂಜೆ, ಆನಂದ್ ಮಹೀಂದ್ರಾ ಆನ್‌ಲೈನ್‌ನಲ್ಲಿ ಈ ಕ್ಷಣವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ನಾಯಿಗೆ ಆಸನವನ್ನು ಕಾಯ್ದಿರಿಸಿರುವುದನ್ನು ನೋಡಬಹುದಾಗಿದೆ.

ಕಾರ್ಯಕ್ರಮದ ಅಂತಿಮ ದಿನದಂದು ಭಾಗವಹಿಸಿದ್ದ ಆನಂದ್ ಮಹೀಂದ್ರಾ, ಕಾಯ್ದಿರಿಸಿದ ಸೀಟಿನಲ್ಲಿ ನಾಯಿ ವಿಶ್ರಾಂತಿ ಪಡೆಯುವುದನ್ನು ನೋಡಿ ಆಶ್ಚರ್ಯಚಕಿತರಾದರು. ಆ ಕ್ಷಣದ ಫೋಟೋ ತೆಗೆದು ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
“ನಾನು ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ಗಳ ಅಂತಿಮ ದಿನದಂದು ಬಾಂದ್ರಾ ಫೋರ್ಟ್ ಆಂಫಿಥಿಯೇಟರ್‌ನಲ್ಲಿದ್ದೇನೆ. ಇಲ್ಲಿ ನಾಯಿಗೆ ಸೀಟು ಕಾಯ್ದಿರಿಸಿರುವುದು ನೋಡಿ ಅಚ್ಚರಿಯಾಯಿತು ಎಂದಿದ್ದಾರೆ. ಈ ಚಿತ್ರಕ್ಕೆ ಲಕ್ಷಕ್ಕೂ ಹೆಚ್ಚು ವ್ಯೂವ್ಸ್​ಗಳು ಬಂದಿದ್ದು, ಜನರು ಥಹರೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ.

https://twitter.com/anandmahindra/status/1629855337057746950?ref_src=twsrc%5Etfw%7Ctwcamp%5Etweetembed%7Ctwterm%5E1629855337057746950%7Ctwgr%5E250589d5b0cfd91b6ae5c653d7dda835de969ce7%7Ctwcon%5Es1_&ref_url=https%3A%2F%2Fwww.news18.com%2Fbuzz%2Fchilled-vibe-pic-of-dog-relaxing-on-a-reserved-seat-amuses-anand-mahindra-7176823.html

https://twitter.com/Ranjeet06929103/status/1629861502613348354?ref_src=twsrc%5Etfw%7Ctwcamp%5Etweetembed%7Ctwterm%5E1629861502613348354%7Ctwgr%5E250589d5b0cfd91b6ae5c653d7dda835de969ce7%7Ctwcon%5Es1_&ref_url=https%3A%2F%2Fwww.news18.com%2Fbuzz%2Fchilled-vibe-pic-of-dog-relaxing-on-a-reserved-seat-amuses-anand-mahindra-7176823.html

https://twitter.com/anandmahindra/status/1629855337057746950?ref_src=twsrc%5Etfw%7Ctwcamp%5Etweetembed%7Ctwterm%5E1629879033847529472%7Ctwgr%5E250589d5b0cfd91b6ae5c653d7dda835de969ce7%7Ctwcon%5Es2_&ref_url=https%3A%2F%2Fwww.news18.com%2Fbuzz%2Fchilled-vibe-pic-of-dog-relaxing-on-a-reserved-seat-amuses-anand-mahindra-7176823.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read