ಮೊಸಳೆ ಬಾಯಲ್ಲಿ ತಲೆ ಇಟ್ಟ ಮೃಗಾಲಯ ಸಿಬ್ಬಂದಿ….! ಹಳೆ ವಿಡಿಯೋ ಮತ್ತೆ ವೈರಲ್

ಕೆಲವರಿಗೆ ಹುಚ್ಚುಸಾಹಸ ಮಾಡುವ ಆಸೆ. ಇದು ಕೆಲವೊಮ್ಮೆ ಪ್ರಾಣಾಂತಕವಾಗಿರುವುದೂ ಉಂಟು. ಆದರೂ ಪ್ರಸಿದ್ಧಿಗೆ ಬರಲು ಏನಾದರೂ ಮಾಡುತ್ತಾರೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಮೊಸಳೆಯ ಬಾಯಿಯಲ್ಲಿ ತಲೆ ಹಾಕಿ ಕೆಲ ಕಾಲ ಇರುವುದನ್ನು ನೋಡಬಹುದು. ಇದು ನೋಡುಗರನ್ನು ಆತಂಕಕ್ಕೆ ತಳ್ಳುತ್ತದೆ. ‘earth.reel’ ಎಂಬ ಇನ್‌ಸ್ಟಾಗ್ರಾಮ್ ಪುಟ ಈ ವಿಡಿಯೋ ಹಂಚಿಕೊಂಡಿದೆ. ಎಕ್ಸ್‌ಪ್ರೆಸ್ ಪ್ರಕಾರ, ಈ ಘಟನೆಯು 2017 ರಲ್ಲಿ ಥೈಲ್ಯಾಂಡ್‌ನ ಕೊ ಸಮುಯಿ ದ್ವೀಪದಲ್ಲಿ ನಡೆದಿದೆ.

ಇಲ್ಲಿ ಮೊಸಳೆ ಪ್ರದರ್ಶನ ನಡೆದಿತ್ತು. ಈ ಸಮಯದಲ್ಲಿ ಮೃಗಾಯಲಯದ ಸಿಬ್ಬಂದಿಯೊಬ್ಬ ಮೊಸಳೆಯ ಮುಂದೆ ಮಂಡಿಯೂರಿ ತನ್ನ ಸಂಪೂರ್ಣ ತಲೆಯನ್ನು ಅದರ ಚಲನೆಯಿಲ್ಲದ ಬಾಯಿಯೊಳಗೆ ಇಡುತ್ತಿರುವುದನ್ನು ಕಾಣಬಹುದು. 10 ಸೆಕೆಂಡು ಹೀಗೆ ಆತ ತಲೆಯನ್ನು ಇಟ್ಟುಕೊಂಡಿದ್ದಾನೆ. ಬಳಿಕ ಆಘಾತಕಾರಿ ಎಂದರೆ ಆತ ತಲೆಯನ್ನು ಹೊರಕ್ಕೆ ತೆಗೆದ ತಕ್ಷಣ ಮೊಸಳೆ ಬಾಯಿ ಮುಚ್ಚಿದೆ. ಇನ್ನು ಒಂದೆರಡು ಸೆಕೆಂಡು ಆತ ತಲೆಯನ್ನು ಅಲ್ಲಿಯೇ ಇಟ್ಟಿದ್ದರೆ ಆತ ಮೊಸಳೆಗೆ ಆಹಾರವಾಗುತ್ತಿದ್ದ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read