HomeIndiaಮತದಾನ ಮಾಡಲು ಮೊದಲಿಗರಾಗಿ ಬಂದ ಐವರಿಗೆ ಸ್ಮರಣಿಕೆ; ಚುನಾವಣಾಧಿಕಾರಿಗಳಿಂದ ವಿಶಿಷ್ಟ ಕಾರ್ಯ

ಮತದಾನ ಮಾಡಲು ಮೊದಲಿಗರಾಗಿ ಬಂದ ಐವರಿಗೆ ಸ್ಮರಣಿಕೆ; ಚುನಾವಣಾಧಿಕಾರಿಗಳಿಂದ ವಿಶಿಷ್ಟ ಕಾರ್ಯ

ಇಂದು ಮೇಘಾಲಯ ಹಾಗೂ ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗಳಿಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಇದರ ಮಧ್ಯೆ ಮೇಘಾಲಯದ ಮತಗಟ್ಟೆ ಒಂದರ ಅಧಿಕಾರಿಗಳು ವಿಶಿಷ್ಟ ಕಾರ್ಯವನ್ನು ಮಾಡಿದ್ದಾರೆ.

ಮತ ಚಲಾವಣೆಗೆ ಮೊದಲಿಗರಾಗಿ ಬಂದ ಐವರಿಗೆ ಸ್ಮರಣಿಕೆಗಳನ್ನು ನೀಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೊದಲೇ ಬಂದು ಮತ ಚಲಾಯಿಸಲಿ ಎಂಬ ಕಾರಣಕ್ಕೆ ಈ ಕಾರ್ಯ ಮಾಡಿರುವುದಾಗಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಘಾಲಯದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಅಭ್ಯರ್ಥಿ ಮೃತಪಟ್ಟಿರುವ ಕಾರಣ ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಮತದಾನ ಮುಂದೂಡಿಕೆಯಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ಒಟ್ಟು 3,419 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

For Latest News Updates, Join Our Whatsapp Community🚩
RELATED ARTICLES

Most Popular