ಪ್ರಕೃತಿಯ ಮಾಯೆಯೇ ವಿಶೇಷ. ಅದನ್ನು ಎಷ್ಟು ಬಣ್ಣಿಸಿದರೂ ಸಾಲದು. ಅದರಲ್ಲಿಯೂ ಕೀಟ, ಪಕ್ಷಿ, ಪ್ರಾಣಿ ಪ್ರಪಂಚಗಳದಲ್ಲಿ ಬಹು ವಿಶೇಷತೆಗಳಿವೆ. ಅಂಥದ್ದೇ ಒಂದು ಕುತೂಹಲದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಕೌತುಕಕ್ಕೆ ತಳ್ಳಿದೆ.
ಕಂಬಳಿಹುಳುಗಳು ಒಗ್ಗಟ್ಟನ್ನು ಪ್ರದರ್ಶಿಸುವ ವಿಡಿಯೋ ಇದಾಗಿದೆ. ಇದನ್ನು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಶೇರ್ ಮಾಡಿದ್ದಾರೆ. ಹಲವಾರು ಕಂಬಳಿ ಹುಳುಗಳು ಒಂದರ ಮೇಲೊಂದು ಸುತ್ತಿಕೊಂಡು ಒಟ್ಟೊಟ್ಟಿಗೆ ಚಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಹುಳುಗಳ ಗುಂಪು ಒಟ್ಟಿಗೆ ರಸ್ತೆಯಲ್ಲಿ ಚಲಿಸುತ್ತಾ, ತೆವಳುತ್ತಾ ಹೋಗುತ್ತದೆ. ನಂತರ ಅವು ಒಂದರ ಮೇಲೊಂದನ್ನು ಏರಿ ವೇಗವನ್ನು ಹೆಚ್ಚಿಸುತ್ತಾ ಸಾಗುತ್ತವೆ. ರೋಲಿಂಗ್ ಸಮೂಹ ಎಂದು ಕರೆಯಲ್ಪಡುವ ರಚನೆಯಲ್ಲಿ ಇವು ಚಲಿಸುವುದನ್ನು ನೋಡಬಹುದು.
ಏಕತೆಯೇ ಶಕ್ತಿ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ಇದಕ್ಕಾಗಿಯೇ ಎಂದು ಹರ್ಷ್ ಹೇಳಿದ್ದು, ಇದನ್ನು ನೋಡಿ ಅಚ್ಚರಿ ಪಡುವಂತಿದೆ.