ವೇಗವಾಗಿ ಬಂದ ಬೈಕುಗಳ ನಡುವೆ ಡಿಕ್ಕಿ; ಹಾರಿ ಬಿದ್ದ ಸವಾರರ ಶಾಕಿಂಗ್ ವಿಡಿಯೋ ಸೆರೆ 25-02-2023 8:10PM IST / No Comments / Posted In: Latest News, India, Live News ಉತ್ತರ ಪ್ರದೇಶದ ಖುಷಿ ನಗರದಲ್ಲಿ ಶುಕ್ರವಾರ ರಾತ್ರಿ ಭೀಕರ ಅಪಘಾತ ನಡೆದಿದೆ. ಬೈಕುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರರು ಗಾಳಿಯಲ್ಲಿ ಹಾರಿ ಹೋಗಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ನ್ಯೂಸ್ ಇಂಡಿಯಾ 1 ಈ ವಿಡಿಯೋ ಹಂಚಿಕೊಂಡಿದ್ದು, ಅತಿ ವೇಗದಲ್ಲಿ ಪರಸ್ಪರ ಎದುರಾಗಿ ಬಂದ ಬೈಕುಗಳು ಡಿಕ್ಕಿಯಾಗಿವೆ. ಇದರ ರಭಸಕ್ಕೆ ಸವಾರರು ಗಾಳಿಯಲ್ಲಿ ಹಾರಿ ಹೋಗಿದ್ದು, ತೀವ್ರವಾಗಿ ಗಾಯಗೊಂಡಿದ್ದವರನ್ನು ಪ್ರಾಥಮಿಕ ಆರೋಗ್ಯಕ್ಕೆ ಕರೆದುಕೊಂಡು ಹೋಗಿದ್ದ ವೇಳೆ ರಿಜ್ವಾನ್ ಅನ್ಸಾರಿ ಎಂಬಾತ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಇತರೆ ಮೂರು ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. #Kushinagar : तेज रफ्तार दो बाइक की हुई आमने सामने जबरदस्त टक्कर टक्कर लगने से दोनो बाइकों सवार चार युवक उछल कर सड़क पर गिरे दो बाइकों की टक्कर की घटना #CCTV फुटेज में हुई कैद टक्कर लगने से दोनों बाइकों की परखच्चे उड़े@kushinagarpol @dm_kushinagar pic.twitter.com/kJBXwAA0YU — News1Indiatweet (@News1IndiaTweet) February 23, 2023