ನವದೆಹಲಿ: ಕರ್ನಾಟಕ ಸಂಸ್ಕೃತಿ, ತಂತ್ರಜ್ಞಾನದಲ್ಲೂ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯ ತಾಲ್ಕಾಟೋರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಬಾರಿಸು ಕನ್ನಡ ಡಿಂಡಿಮ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂದು ಹೇಳಿದ್ದಾರೆ.
ದೆಹಲಿ ಕನ್ನಡ ಸಂಘಟನೆ 75 ವರ್ಷ ಪೂರೈಸಿದೆ. ದೇಶ ಕಟ್ಟುವ ಕೆಲಸದಲ್ಲಿ ತನ್ನ ಸೇವೆ ಸಲ್ಲಿಸಿದೆ. ಸಂಘದ ಎಲ್ಲ ಜನರು ಅಭಿನಂದನೆಗೆ ಅರ್ಹರು ಎಂದರು. ಕರ್ನಾಟಕದ ಸಿರಿಧಾನ್ಯಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಿದ್ದರು. ಸಿರಿಧಾನ್ಯದ ಪ್ರಮುಖ ಕೇಂದ್ರ ಕರ್ನಾಟಕ. ರಾಗಿ ಕರ್ನಾಟಕ ಸಂಸ್ಕೃತಿಯ ಭಾಗ ಎಂದು ಹೇಳಿದ್ದಾರೆ.