ಹೈದರಾಬಾದ್: ಪೊಲೀಸ್ ಪೇದೆಯೊಬ್ಬರು ಜಿಮ್‌ನಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ಸಿಸಿ ಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ, ಮತ್ತೊಬ್ಬ ವ್ಯಕ್ತಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಬಳಿಕ ಟ್ರಾಫಿಕ್ ಪೊಲೀಸರೊಬ್ಬರು ಆತನನ್ನು ರಕ್ಷಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪೊಲೀಸ್ ಸಿಬ್ಬಂದಿಯನ್ನು ತೆಲಂಗಾಣದ ರಾಜೇಂದ್ರನಗರ ಪೊಲೀಸ್ ಠಾಣೆಯ ರಾಜಶೇಖರ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ, ಅವರು ಪದೇ ಪದೇ ವ್ಯಕ್ತಿಯ ಹೃದಯದ ಪ್ರದೇಶವನ್ನು ಒತ್ತುವುದನ್ನು ಮತ್ತು ಅವರನ್ನು ಅಪಾಯದಿಂದ ರಕ್ಷಿಸಲು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ವಿಧಾನವನ್ನು ಅನುಸರಿಸುವುದನ್ನು ನಾವು ನೋಡಬಹುದು.
ತೆಲಂಗಾಣದ ವೈದ್ಯಕೀಯ – ಆರೋಗ್ಯ ಮತ್ತು ಹಣಕಾಸು ಖಾತೆ ಸಚಿವ ತನೀರು ಹರೀಶ್ ರಾವ್ ಅವರು ಈ ಕಾರ್ಯಕ್ಕಾಗಿ ಪೇದೆಯನ್ನು ಶ್ಲಾಘಿಸಿದ್ದಾರೆ. “ರಾಜೇಂದ್ರನಗರ ಪಿಎಸ್‌ನ ಟ್ರಾಫಿಕ್ ಪೋಲೀಸ್ ರಾಜಶೇಖರ್ ತಕ್ಷಣವೇ ಸಿಪಿಆರ್ ಮಾಡುವ ಮೂಲಕ ಅಮೂಲ್ಯವಾದ ಜೀವವನ್ನು ಉಳಿಸುವಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಕ್ಕಾಗಿ ಹೆಚ್ಚು ಪ್ರಶಂಸಿಸುತ್ತೇನೆ” ಎಂದು ಅವರು ಟ್ವಿಟರ್ನಲ್ಲಿ ಬರೆದಿದ್ದಾರೆ.