ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. 2022 -23ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಗೆ ಅನುಕೂಲ ಕಲ್ಪಿಸಲು ಫೆಬ್ರವರಿ 27 ರಿಂದ ಮಾರ್ಚ್ 23ರ ವರೆಗೆ ಆಕಾಶವಾಣಿ ಮೂಲಕ ಬಾನ್ದನಿ ರೇಡಿಯೋ ಪಾಠ ಪ್ರಸಾರ ಮಾಡಲಾಗುತ್ತದೆ.
ಕಳೆದ ಡಿಸೆಂಬರ್ 1 ರಿಂದ 9ನೇ ತರಗತಿ ಮಕ್ಕಳಿಗೆ ನೀತಿ ಕತೆ, ಯೋಗ ಮತ್ತು ಆರೋಗ್ಯ ಶಿಕ್ಷಣ, ವೃತ್ತಿ ಶಿಕ್ಷಣ ಮತ್ತು ಶೈಕ್ಷಣಿಕ ಮಾರ್ಗದರ್ಶನ, ಇಂಗ್ಲಿಷ್ ಕಲಿಕೆ ಒಳಗೊಂಡ ಸಾಮಾನ್ಯ ಪಾಠಗಳು, 4, 5ನೇ ತರಗತಿಗೆ ಕನ್ನಡ ಮತ್ತು ಗಣಿತ ವಿಷಯಗಳ ಪಾಠಗಳನ್ನು ಆಕಾಶವಾಣಿಯಲ್ಲಿ ಸೋಮವಾರದಿಂದ ಗುರುವಾರದವರೆಗೆ ಮಧ್ಯಾಹ್ನ 2:35 ರಿಂದ 3 ಗಂಟೆಯವರೆಗೆ ಪ್ರಸಾರ ಮಾಡಲಾಗುತ್ತಿದೆ.
ಈಗ ಎಸ್ಎಸ್ಎಲ್ಸಿ ಪರೀಕ್ಷೆಗಾಗಿ ಬಾನ್ದನಿ ಕಾರ್ಯಕ್ರಮ ಫೆಬ್ರವರಿ 27ರಿಂದ 13 ಆಕಾಶವಾಣಿ ಕೇಂದ್ರಗಳು ಹಾಗೂ 3 ವಿವಿಧ ಭಾರತೀಯ ಕೇಂದ್ರಗಳಿಂದ ಏಕಕಾಲದಲ್ಲಿ ಪ್ರಸಾರವಾಗಲಿದೆ. ಸಾಮಾನ್ಯ ಮೊಬೈಲ್, ಆಲ್ ಇಂಡಿಯಾ ರೇಡಿಯೋ ಬೆಂಗಳೂರು, ಯುಟ್ಯೂಬ್ ಚಾನೆಲ್, ಪ್ರಸಾರ ಭಾರತಿ ನ್ಯೂಸ್ ಆನ್ ಏರ್ ನಲ್ಲಿಯೂ ಬಾನ್ದನಿ ರೇಡಿಯೋ ಪಾಠ ಪ್ರಸಾರವಾಗಲಿದೆ. ಪೂರ್ಣ ವೇಳಾಪಟ್ಟಿಗಾಗಿ http://desert.jar.nic.in ವೆಬ್ಸೈಟ್ ಗಮನಿಸಬಹುದಾಗಿದೆ.