ಡೇಟಿಂಗ್ ಆ್ಯಪ್ಗಳು ಈಗ ಬೇಕಾದಷ್ಟು ಇವೆ. ವಿದೇಶಗಳಲ್ಲಿ ಬಹಳ ಪ್ರಸಿದ್ಧವಾಗಿದ್ದ ಈ ಆ್ಯಪ್ಗಳು ಭಾರತಕ್ಕೆ ಕಾಲಿಟ್ಟು ವರ್ಷಗಳೇ ಆಗಿವೆ. ಅಚ್ಚರಿ ಎನಿಸುವಷ್ಟು ರೀತಿಯಲ್ಲಿ ಇದರ ಬಳಕೆ ಮಾಡುವವರು ಇದ್ದಾರೆ. ಯುವಕ-ಯುವತಿಯರಿಂದ ಹಿಡಿದು ವೃದ್ಧರವರೆಗೂ ಈ ಆ್ಯಪ್ ಬಳಸಿ ತಮಗೆ ಬೇಕಾದ ಜೋಡಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಇಂಥ ಸಮಯದಲ್ಲಿ ಡೇಟಿಂಗ್ಗೆ ಕರೆಯುವ ಮೊದಲು ಹುಡುಗರು ಹುಡುಗಿಯರನ್ನು ಇಂಪ್ರೆಸ್ ಮಾಡಲು ನೋಡುತ್ತಾರೆ. ಅದಕ್ಕಾಗಿ ಯಾವ ಮಾರ್ಗ ಅನುಸರಿಸಬೇಕು ಎಂಬುದು ಹಲವರನ್ನು ಕಾಡುತ್ತದೆ. ಅದರ ಬಗ್ಗೆ ಕುತೂಹಲದ ಮಾಹಿತಿಯನ್ನು ಟ್ವಿಟ್ಟರ್ ಬಳಕೆದಾರ ಉಜ್ಜಲ್ ಅಥರ್ವ್ ಎನ್ನುವವರು ಬರೆದುಕೊಂಡಿದ್ದಾರೆ.
ತಮ್ಮ ಮತ್ತು ಯುವತಿಯೊಬ್ಬಳ ನಡುವೆ ನಡೆದಿರುವ ಚಾಟಿಂಗ್ನ ಸ್ಕ್ರೀನ್ಷಾಟ್ ಹಾಕಿರುವ ಅವರು, ತಮ್ಮ ನಡುವೆ ನಡೆದ ಸಂವಾದದ ಕುರಿತು ತಿಳಿಸಿದ್ದಾರೆ. ಅದರಲ್ಲಿ ‘ವಾಟ್ ಎಬೌಟ್ ಎ ಡೇಟ್’ ಎಂದು ಪ್ರಶ್ನಿಸಿದ್ದಾನೆ. ಆಗ ಯುವತಿ, ಜಾಣತನದಿಂದ 3 ಹಾಡುಗಳನ್ನು ಆಯ್ಕೆ ಮಾಡಿದ್ದಾಳೆ. ಅದರಲ್ಲಿ ಆಕೆ ‘ನಾನು ನಾಳೆ ಕೆಫೆಯಲ್ಲಿ ನಿಮ್ಮನ್ನು ನೋಡಲು ಬಯಸುತ್ತೇನೆ’ ಎಂದಷ್ಟೇ ಹೇಳಿದ್ದಾಳೆ. ಮುಂದೆ ಏನು ಮಾಡಬೇಕು ಎನ್ನುವುದನ್ನು ಕೆಫೆಯಲ್ಲಿ ಹೇಳುವೆ ಎಂಬ ಸಂದೇಶ ನೋಡಿ ಯುವಕ ಅಬ್ಬಬ್ಬಾ ಈ ಹುಡುಗಿ ಎಂಥ ಬುದ್ಧಿವಂತೆ ಎಂದಿದ್ದಾನೆ.
ಇದನ್ನು ನೋಡುತ್ತಿದ್ದಂತೆಯೇ ಯುವಕರಲ್ಲಿ ಹಲವು ಪ್ರಶ್ನೆ ಕಾಡಿದೆ. ಮುಂದೇನಾಯ್ತು? ನೀವು ಹೋದ್ರಾ? ಅವಳು ಏನೆಂದಳು ಎಂದೆಲ್ಲಾ ಉಜ್ಜಲ್ ಅಥರ್ವ್ ಅವರನ್ನು ಪ್ರಶ್ನಿಸುತ್ತಿದ್ದಾರೆ.