HomeKarnatakaಬೆಂಗಳೂರಿನ ದೋಸೆಗೆ ಮನಸೋತ ಬ್ರಿಟಿಷ್​ ಹೈ ಕಮಿಷನರ್​

ಬೆಂಗಳೂರಿನ ದೋಸೆಗೆ ಮನಸೋತ ಬ್ರಿಟಿಷ್​ ಹೈ ಕಮಿಷನರ್​

ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಆಹಾರ ಪ್ರಿಯರಾಗಿದ್ದಾರೆ ಮತ್ತು ಸ್ಥಳೀಯ ಭಾರತೀಯ ಭಕ್ಷ್ಯಗಳನ್ನು ಆನಂದಿಸುವ ಕುರಿತು ಅವರ ಹಲವಾರು ಪೋಸ್ಟ್‌ಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಅವರ ಇತ್ತೀಚಿನ ಟ್ವೀಟ್ ಅವರಿಗೆ ಭಾರತದ ಆಹಾರದ ಮೇಲೆ ಎಲ್ಲಿಲ್ಲದ ಪ್ರೀತಿಯಂತೆ. ಇದೇ ಕಾರಣಕ್ಕೆ ಇಲ್ಲಿಯ ಥಹರೇವಾರಿ ತಿನಿಸುಗಳ ಬಗ್ಗೆ ಅವರು ಬರೆದುಕೊಳ್ಳುತ್ತಲೇ ಇರುತ್ತಾರೆ. ಇದೀಗ ಬೆಂಗಳೂರಿನ ದೋಸೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಿಸ್ ಅವರು, ಈ ಹಿಂದೆ ವಡಾ ಪಾವ್, ದೋಸೆ ಮತ್ತು ರೋಡಗುಲ್ಲಾ ಇತ್ಯಾದಿಗಳ ಬಗ್ಗೆ ಬರೆದುಕೊಂಡಿದ್ದರು. ಅದನ್ನು ಸವಿಯುವ ಫೋಟೋಗಳನ್ನು ಶೇರ್​ಮಾಡಿಕೊಂಡು ಭಾರತೀಯ ಆಹಾರದ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದರು. ಇದೀಗ ಬೆಂಗಳೂರಿನ ದೋಸೆಯ ಕುರಿತು ಬರೆದಿದ್ದಾರೆ. ಗರಿಗರಿಯಾದ ದೋಸೆ, ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿ ಬಹಳ ವಿಶೇಷವಾಗಿತ್ತು. ಭಾರತದ ಆಹಾರ ಪದ್ಧತಿಗೆ ಮನಸೋತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

https://twitter.com/hpdave6/status/1628665428770967553?ref_src=twsrc%5Etfw%7Ctwcamp%5Etweetembed%7Ctwterm%5E16

For Latest News Updates, Join Our Whatsapp Community🚩
RELATED ARTICLES

Most Popular