ತಂದೆಯೊಬ್ಬ ತನ್ನ 33 ವರ್ಷದ ಮಗಳನ್ನು ಚಿಕ್ಕಮಕ್ಕಳಂತೆಯೇ ರೈಲು ಹತ್ತಿಸಿ, ಆಕೆಯನ್ನು ಸೀಟಿನಲ್ಲಿ ಕುಳ್ಳರಿಸುವ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಟೆಂಟ್ ಕ್ರಿಯೇಟರ್ ಶೇರ್ ಮಾಡಿಕೊಂಡಿದೆ.
ಮಗಳನ್ನು ಮುಂಜಾನೆ ನಾಲ್ಕು ಗಂಟೆಗೆ ಏಳಿಸುವ ಅಪ್ಪ ಕಾರಿನಲ್ಲಿ ಆಕೆಯನ್ನು ರೈಲು ನಿಲ್ದಾಣದವರೆಗೆ ಬಿಟ್ಟು, ತಾವೂ ರೈಲಿನವರೆಗೆ ಹೋಗಿ ಸೀಟನ್ನು ಹುಡುಕಿ ಮಗಳನ್ನು ಕುಳ್ಳರಿಸಿ ವಾಪಸ್ ಹೋಗುತ್ತಾರೆ. “ನನಗೆ 33 ವರ್ಷ ಮತ್ತು ನನ್ನ ತಂದೆ ನನ್ನನ್ನು ಶಿಶುವಿಹಾರಕ್ಕೆ ಕರೆದೊಯ್ಯುತ್ತಿದ್ದಂತೆಯೇ ಈಗಲೂ ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯುತ್ತಾರೆ. ಬೆಳಿಗ್ಗೆ 4 ಗಂಟೆಗೆ ಎದ್ದು ನನ್ನನ್ನು ನಿಲ್ದಾಣಕ್ಕೆ ಕರೆದೊಯ್ಯುತ್ತಾರೆ ಎಂದು ಅದರಲ್ಲಿ ಬರೆಯಲಾಗಿದೆ.
“ಅವರಿಗೆ ತಿಳಿಯದಂತೆ ಈ ವಿಡಿಯೋ ತೆಗೆದಿದ್ದೆ. ಗೊತ್ತಾದಾಗ ಅವರು ಕಣ್ಣೀರು ಹಾಕಿದರು. ನನ್ನ ತಂದೆಯ ಬೇಷರತ್ತಾದ ಪ್ರೀತಿಯಿಂದ ನಾನು ಈ ವೀಡಿಯೊ ಮಾಡುವಾಗ ಅಳುತ್ತೇನೆ, ”ಎಂದು ವೀಡಿಯೊದ ಶೀರ್ಷಿಕೆಯನ್ನು ಓದಲಾಗಿದೆ. ಇದಕ್ಕೆ ಪರ- ವಿರೋಧ ಎರಡೂ ಅಭಿಪ್ರಾಯಗಳು ವ್ಯಕ್ತವಾಗಿದೆ. ಅಪ್ಪನ ಪ್ರೀತಿಯನ್ನು ಕೆಲವರು ಮೆಚ್ಚಿದರೆ, ಇದು ಅತಿಯಾಯಿತು. ಯಾವುದಕ್ಕೂ ಮಿತಿ ಇದ್ದರೆ ಚೆನ್ನ. ಇಂಥದ್ದನ್ನು ವಿಡಿಯೋ ಬೇರೆ ಮಾಡಿ ಹಾಕುವುದು ಹಾಸ್ಯಾಸ್ಪದ ಎಂದಿದ್ದಾರೆ.
https://www.youtube.com/watch?v=17Y1AvkpJ9s