ಸ್ವಿಗ್ಗಿ ಇನ್ಸ್ಟಾಮಾರ್ಟ್ನಲ್ಲಿ ಆರ್ಡರ್ ಮಾಡಿದವರಿಗೆ 2000 ರೂಪಾಯಿಯ ನಕಲಿ ನೋಟುಗಳು ಬಂದಿರೋ ಘಟನೆ ನಡೆದಿದೆ. ಸ್ವಿಗ್ಗಿ ಕಂಪೆನಿ ಆಹಾರ, ವಿತರಣೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಇನ್ಸ್ಟಾಮಾರ್ಟ್ನಲ್ಲಿ ಈ ಘಟನೆ ನಡೆದಿದೆ.
ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಎಂಬ ಹೊಸ ಮಾರ್ಕೆಟಿಂಗ್ ತಂತ್ರವನ್ನು ಇತ್ತೀಚೆಗೆ ಜಾರಿಗೆ ತಂದಿದೆ. ಇದೀಗ ಈ ಸಂಸ್ಥೆ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾದ ಇತ್ತೀಚಿನ ಆಕ್ಷನ್ ಥ್ರಿಲ್ಲರ್ ವೆಬ್ ಸೀರಿಸ್ ‘Farzi’ ಪ್ರಚಾರದ ಭಾಗವಾಗಿ, ತಮ್ಮ ಗ್ರಾಹಕರಿಗೆ ನಕಲಿ 2,000 ರೂ ನೋಟುಗಳನ್ನು ಪಾರ್ಸೆಲ್‌ಗಳಲ್ಲಿ ಕಳುಹಿಸಲಾಗಿದೆ. ಇದನ್ನು ನೋಡಿದ ಗ್ರಾಹಕರು ಆಶ್ಚರ್ಯಚಕಿತರಾಗಿದ್ದಾರೆ.
ಸ್ವಿಗ್ಗಿ ಪಾರ್ಸೆಲ್‌ನಲ್ಲಿ 2,000 ರೂಪಾಯಿ ನಕಲಿ ನೋಟುಗಳು ಬಂದಿವೆ ಎಂದು ಗ್ರಾಹಕರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ನೋಟುಗಳ ಫೋಟೋಗಳನ್ನೂ ಟ್ವೀಟ್ ಮಾಡಿದ್ದಾರೆ. ಇನ್ನು ಮುಂಬೈ, ದೆಹಲಿ, ಗುರ್ಗಾಂವ್, ನೋಯ್ಡಾ, ಕೋಲ್ಕತ್ತಾ, ಬೆಂಗಳೂರು, ಪುಣೆ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಗ್ರಾಹಕರು ಸ್ವಿಗ್ಗಿ ಪಾರ್ಸೆಲ್‌ಗಳಲ್ಲಿ 2,000 ರೂಪಾಯಿ ನಕಲಿ ನೋಟುಗಳನ್ನು ಸ್ವೀಕರಿಸಿದ್ದಾರೆ. ನಕಲಿ 2,000 ರೂಪಾಯಿ ನೋಟುಗಳು ಫರ್ಝಿ ವೆಬ್ಸೀರಿಸ್ನಲ್ಲಿ ನಟಿಸಿರುವ ಶಾಹಿದ್ ಕಪೂರ್ ಮತ್ತು ವಿಜಯ್ ಸೇತುಪತಿ ಅವರ ಫೋಟೋಗಳನ್ನು ಹೊಂದಿವೆ.