ಬೆಂಗಳೂರು: 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಮಾರ್ಚ್ 13 ರಿಂದ 8ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಯಲಿದೆ. ಮಾರ್ಚ್ 15 ರಿಂದ 5 ನೇ ತರಗತಿಗೆ ಪರೀಕ್ಷೆ ಆರಂಭವಾಗಲಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕ ಮೌಲ್ಯಾಂಕನ ಪರೀಕ್ಷೆ ನಡೆಸಲಿದೆ. ಇದಕ್ಕಾಗಿ ವೇಳಾಪಟ್ಟಿ ಪ್ರಕಟಿಸಲಾಗಿದೆ.
5ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಮಾರ್ಚ್ 15 ಪ್ರಥಮ ಭಾಷೆ –ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು
ಮಾರ್ಚ್ 16 ಗಣಿತ,
ಮಾರ್ಚ್ 17 ಪರಿಸರ ಅಧ್ಯಯನ
ಮಾರ್ಚ್ 18 ದ್ವಿತೀಯ ಭಾಷೆ
8ನೇ ತರಗತಿ ವೇಳಾಪಟ್ಟಿ
ಮಾರ್ಚ್ 13 ಪ್ರಥಮ ಭಾಷೆ –ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ
ಮಾರ್ಚ್ 14 ದ್ವಿತೀಯ ಭಾಷೆ –ಇಂಗ್ಲಿಷ್, ಕನ್ನಡ
ಮಾರ್ಚ್ 15 ತೃತೀಯ ಭಾಷೆ –ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
ಮಾರ್ಚ್ 16 ಗಣಿತ
ಮಾರ್ಚ್ 17 ವಿಜ್ಞಾನ
ಮಾರ್ಚ್ 18 ಸಮಾಜ ವಿಜ್ಞಾನ