ಈ ಸಿಸಿಟಿವಿ ಕ್ಯಾಮೆರಾಗಿಂತಲೂ ಚಿಕ್ಕದಾದ ಕ್ಯಾಮೆರಾವನ್ನ ಮನೆಯ ಬಾಗಿಲಿಗೆ ಹಾಕುತ್ತಾರೆ. ಇದಕ್ಕೆ ಡೋರ್‌ಬೆಲ್ ಕ್ಯಾಮೆರಾ ಎಂದು ಹೇಳಲಾಗುತ್ತೆ. ಇದೇ ಕಾಮೆರಾದ ಸಹಾಯದಿಂದ ಯುಎಸ್ ಪೊಲೀಸರು ಕಳ್ಳನನ್ನ ಹಿಡಿದಿದ್ದಾರೆ.
ಈ ವಿಡಿಯೋದಲ್ಲಿ ಸೊರೊಸ್ ಹೆಸರಿನ ಪೊಲೀಸ್ ಅಧಿಕಾರಿ, ಅಲ್ಲಿ ಇಲ್ಲಿ ಹುಡುಕುವುದನ್ನ ನೀವು ಗಮನಿಸಬಹುದು. ಅದೇ ಸಮಯದಲ್ಲಿ ಮಹಿಳೆಯೊರ್ವಳ ದನಿ ಕೇಳಿಸುತ್ತೆ. ಅದು ಅಲ್ಲೇ ಇದ್ದ ಮೈಕ್ರೋ ಫೋನಿನದ್ದಾಗಿರುತ್ತೆ. ಪೊಲೀಸ್ ಅಧಿಕಾರಿ ಆಕೆಗೆ, ಇಲ್ಲಿ ಯಾರಾದರೂ ಕೆಂಪು ಬಣ್ಣದ ಶರ್ಟ್ ಹಾಕಿರುವ ವ್ಯಕ್ತಿ ಏನಾದರೂ ಓಡಾಡಿರುವ ಗಮನಕ್ಕೆ ಬಂದಿದೆಯಾ ಎಂದು ಕೇಳುತ್ತಾನೆ.
ತಕ್ಷಣವೇ ಆಕೆ ” ಅಲ್ಲೇ ಇರುವ ಕಸದ ರಾಶಿ ಇರುವ ಬುಟ್ಟಿ ಬಳಿಗೆ ಹೋಗಿ. ಅದು ನನ್ನ ಗಾರ್ಬೆಜ್ ಪಕ್ಕದಲ್ಲಿದೆ. ಆತ ಅಲ್ಲೇ ಅಡಗಿ ಕೂತಿದ್ದಾನೆ. ” ಎಂದು ಹೇಳಿದ್ದಾಳೆ.
ಆಕೆಯ ಮಾತನ್ನ ಕೇಳಿದಾಕ್ಷಣ ಪೊಲೀಸ್ ಅಧಿಕಾರಿಗಳು ಬಂದೂಕನ್ನ ಹಿಡಿದುಕೊಂಡು ಆ ಕಸದ ಬುಟ್ಟಿ ಬಳಿಗೆ ಹೋಗಿದ್ದಾರೆ.
“ಕಸದ ಬುಟ್ಟಿಯ ಮುಚ್ಚಳನ್ನ ತೆಗೆದು ಹೊರಗೆ ಬಾ, ನಮಗೆ ಗೊತ್ತು ನೀನು ಇಲ್ಲೇ ಇದ್ದಿಯಾ” ಎಂದು ಹೇಳಿದ್ದಾರೆ. ಪೊಲೀಸರು ಕೊಟ್ಟ ವಾರ್ನಿಂಗ್ ಕೇಳಿ ಆತ ಹೊರಗೆ ಏದ್ದು ಬಂದಿದ್ದಾನೆ. ಆದರೆ ಮತ್ತೆ ಪೊಲೀಸರ ಕಣ್ತಪ್ಪಿಸಿ ಮತ್ತೆ ಓಡೋಗೋದಕ್ಕೆ ನೋಡಿದ್ದಾನೆ. ಆದರೆ ಪೊಲೀಸರು ಆತನನ್ನ ಗಟ್ಟಿಯಾಗಿ ಹಿಡಿದು ಕೈಗೆ ಬೇಡಿಯನ್ನ ಹಾಕಿದ್ದಾರೆ.
ಈ ವಿಡಿಯೋವನ್ನ ಜಾಜ್ ಅನ್ನೊ ವ್ಯಕ್ತಿ ಟ್ವಿಟರ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ” ಅದ್ಭುತವಾಗಿರುವ ರಿಂಗ್ ಕ್ಯಾಮೆರಾ” ಎಂದು ಬರೆದಿದ್ದಾರೆ. ಈ ವಿಡಿಯೋವನ್ನ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕಾಮೆಂಟ್ ಮಾಡಿದವರೆಲ್ಲರೂ ಪ್ರತಿಯೊಬ್ಬರ ಮನೆಯಲ್ಲೂ ಸುರಕ್ಷತೆಗಾಗಿ ಈ ರೀತಿ ಕ್ಯಾಮೆರಾ ಹಾಕಿಕೊಳ್ಳೋದು ತುಂಬಾ ಒಳ್ಳೆಯದು ಎಂದು ಕಾಮೆಂಟ್ ಮಾಡಿದ್ದಾರೆ.