ಜಪಾನ್‌ನ ಕಡಲತೀರದಲ್ಲಿ ಅಜ್ಞಾತ ಲೋಹದ ಚೆಂಡೊಂದು ಪತ್ತೆಯಾಗಿದೆ. ಕಡಲತೀರದಲ್ಲಿ ಇದು ಸಿಕ್ಕಿದ್ದು ಆತಂಕ ಸೃಷ್ಟಿಸಿದೆ. ಈ ಕುರಿತು ತನಿಖೆ ಮಾಡಲು ಅಧಿಕಾರಿಗಳು ಆರಂಭಿಸಿದ್ದಾರೆ. ವಾರ್ ಆಫ್ ದಿ ವರ್ಲ್ಡ್ಸ್ ಮತ್ತು ಗಾಡ್ಜಿಲ್ಲಾದಂತಹ ವಿವಿಧ ವೈಜ್ಞಾನಿಕ ಚಲನಚಿತ್ರಗಳ ಗೋಳಗಳಿಗೆ ಈ ಚೆಂಡನ್ನು ಹೋಲಿಸಲಾಗಿದೆ.
ಅಸಾಹಿ ನ್ಯೂಸ್ ವರದಿಯ ಪ್ರಕಾರ, ಸ್ಥಳೀಯ ಮಹಿಳೆಯೊಬ್ಬರು ಈ ಚೆಂಡನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಈ ಚೆಂಡು 1.5 ಮೀಟರ್ ವ್ಯಾಸದ ಅಳತೆಯನ್ನು ಹೊಂದಿರುವುದಾಗಿ ಹೇಳಲಾಗಿದೆ.
ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸುತ್ತಲೂ ಪ್ರವೇಶ ನಿರ್ಬಂಧಿಸಲಾಗಿದೆ. ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಸಂಚಾರ ನಿಷೇಧಿಸಲಾಗಿದ್ದು, ಇದರ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಅಧ್ಯಯನದ ವೇಳೆ ಸಂಶೋಧಕರು ರಕ್ಷಣಾ ಸಾಧನಗಳನ್ನು ಧರಿಸಿದ್ದರು. ಎಕ್ಸ್ ರೇ ಸ್ಕ್ಯಾನ್ ಮಾಡಿಸಿದಾಗ ಈ ಚೆಂಡು ಟೊಳ್ಳಾಗಿದೆ ಎಂದು ತಿಳಿದು ಬಂದಿದೆ. ಸ್ಫೋಟದ ಅಪಾಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೂ ತನಿಖೆ ಮುಂದುವರೆದಿದೆ.
https://twitter.com/Flash_news_ua/status/1627921965263511558?ref_src=twsrc%5Etfw%7Ctwcamp%5Etweetembed%7Ctwterm%5E1627921965263511558%7Ctwgr%5E3865d61edbe86536e49357649b6dab1033e82aac%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-giant-sphere-found-on-the-coast-of-japan