HomeKarnatakaBIG NEWS: ಮಗಳ ಮದುವೆಗೆ ಸಾಲ; ಒಂದೇ ಕುಟುಂಬದ ಮೂವರು ಆತ್ಮಹತ್ಯೆ

BIG NEWS: ಮಗಳ ಮದುವೆಗೆ ಸಾಲ; ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಹಾವೇರಿ: ಸಾಲಬಾದೆಗೆ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ.

ತಂದೆ-ತಾಯಿ ಹಾಗೂ ಮಗಳು ಮೂವರು ನೇಣಿಗೆ ಕೊರಳೊಡ್ಡಿದ್ದಾರೆ. ಹನುಮಂತಗೌಡ ಪಾಟೀಲ್ (52), ಲಲಿತಾ ಪಾಟೀಲ್ (50) ಹಾಗೂ ನೇತ್ರಾ (22) ಮೃತರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹನುಮಂತೇಗೌಡ ಹಾಗೂ ಲಲಿತಾ, ಮಗಳ ಮದುವೆಗಾಗಿ 25 ಲಕ್ಷ ರೂಪಾಯಿ ಸಾಲ ಮಾಡಿದ್ದರಂತೆ. ದಿನದಿಂದ ದಿನಕ್ಕೆ ಸಾಲ ಬೆಳೆಯುತ್ತಾ ಹೋಗಿದ್ದು, ಸಾಲ ತೀರಿಸಲು ಸಾಧ್ಯವಾಗದೇ ನೊಂದು ಮನೆಯಲ್ಲಿದ್ದ ಮಗಳೊಂದಿಗೆ ತಂದೆ-ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular