Watch Video | ಮದ್ಯ ಕುಡಿದು ರಂಪಾಟ ನಡೆಸಿದವರಿಂದ ನೃತ್ಯ ಮಾಡಿಸಿದ ಪೊಲೀಸರು

ರಾಜ್​ಕೋಟ್​: ಕುಡುಕರಿಗೆ ಬುದ್ಧಿ ಕಲಿಸಲು ಪೊಲೀಸರು ಎಲ್ಲ ಕುಡುಕರನ್ನು ಒಟ್ಟಿಗೆ ಸೇರಿಸಿ ನೃತ್ಯ ಮಾಡಿಸಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕವಾಗಿ ಮದ್ಯ ಸೇವಿಸಿದ್ದಕ್ಕಾಗಿ ಕೆಲ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವೈರಲ್ ವೀಡಿಯೊದಲ್ಲಿ, ರಾಜ್‌ಕೋಟ್ ಪೊಲೀಸರು ಎಲ್ಲಾ ಬಂಧಿತರನ್ನು ಒಟ್ಟಿಗೇ ಸೇರಿಸಿ ಸಾಲಾಗಿ ನಿಲ್ಲಿಸಿರುವುದನ್ನು ನೋಡಬಹುದು. ಮದುವೆಯ ಮೆರವಣಿಗೆಯಲ್ಲಿ ನೃತ್ಯ ಮಾಡುವ ರೀತಿಯಲ್ಲಿ ಎಲ್ಲರಿಗೂ ನೃತ್ಯ ಮಾಡುವಂತೆ ಗದರಿಸಿದ್ದಾರೆ. ಎಲ್ಲಾ ಕುಡುಕರೂ ನೃತ್ಯ ಮಾಡಿದ್ದಾರೆ.

ವೀಡಿಯೊದ ಆರಂಭದಲ್ಲಿ, ಪೊಲೀಸ್ ಅಧಿಕಾರಿಯು ಕುಡಿದ ವ್ಯಕ್ತಿಯನ್ನು ನೀವು ಯಾರಿಂದ ಮದ್ಯ ಖರೀದಿ ಮಾಡಿದ್ದೀರಿ ಎಂಬುದನ್ನು ಪ್ರಶ್ನಿಸಿದ್ದಾರೆ. ನಂತರ ಎಲ್ಲೆಲ್ಲಿಂದ ಮದ್ಯ ಖರೀದಿಯಾಗಿದೆ ಎಂಬುದನ್ನು ಬರೆದುಕೊಂಡಿದ್ದಾರೆ. ನಂತರ ಮದ್ಯ ಹೇಗೆ ಖರೀದಿಸಿದ್ದೀರಿ ಎಂದು ತೋರಿಸುವಂತೆ ಬಂಧಿತರನ್ನು ಕೇಳಿದ್ದು, ನಂತರ ನೃತ್ಯ ಮಾಡುವಂತೆ ಗದರಿಸಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಿದೆ.

https://twitter.com/kumarmanish9/status/1627884959699722241?ref_src=twsrc%5Etfw%7Ctwcamp%5Etweetembed%7Ctwterm%5E1627884959699722241%7Ctwgr%5Ec5cead6c25d470cb2e1ba59a25fd122a9f361e59%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-gujarats-rajkot-police-makes-drunk-baraatis-recreate-dancing-scene-video-goes-viral

https://twitter.com/AAPNareshBalyan/status/1627923967599337472?ref_src=twsrc%5Etfw%7Ctwcamp%5Etweetembed%7Ctwterm%5E1627923967599337472%7Ctwgr%5Ec5cead6c25d470cb2e1ba59a25fd122a9f361e59%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-gujarats-rajkot-police-makes-drunk-baraatis-recreate-dancing-scene-video-goes-viral

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read