HomeCrimeವ್ಯಕ್ತಿ ತೆಗೆದುಕೊಂಡು ಹೋಗುತ್ತಿದ್ದ ಬ್ಯಾಗ್ ಪರಿಶೀಲಿಸಿ ಬೆಚ್ಚಿಬಿದ್ದ ಪೊಲೀಸ್: ಅದರಲ್ಲಿತ್ತು ಕತ್ತರಿಸಿದ ರುಂಡ...!

ವ್ಯಕ್ತಿ ತೆಗೆದುಕೊಂಡು ಹೋಗುತ್ತಿದ್ದ ಬ್ಯಾಗ್ ಪರಿಶೀಲಿಸಿ ಬೆಚ್ಚಿಬಿದ್ದ ಪೊಲೀಸ್: ಅದರಲ್ಲಿತ್ತು ಕತ್ತರಿಸಿದ ರುಂಡ…!

ರಸ್ತೆಯಲ್ಲಿ ನಡೆದುಹೋಗುತ್ತಿದ್ದ ವ್ಯಕ್ತಿ ಒಬ್ಬನನ್ನು ತಡೆದು ಬ್ಯಾಗ್ ಪರಿಶೀಲಿಸಿದ ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ದೇಹದಿಂದ ಬೇರ್ಪಡಿಸಿದ್ದ ತಲೆ ಪತ್ತೆಯಾಗಿದ್ದು, ಇದೀಗ ದೇಹದ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.

ಇಂತಹದೊಂದು ಆಘಾತಕಾರಿ ಘಟನೆ ಅಸ್ಸಾಂನ ಜೊಹ್ರಾತ್ ಜಿಲ್ಲೆಯ ಬಾಗ್ಮೋರದಲ್ಲಿ ನಡೆದಿದ್ದು, ಲಡೋಯಿಘರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೋಹಿತ್ ಗೋಗಾಯ್ ಎಂಬ ಈ ವ್ಯಕ್ತಿ ಮುಂಡವಿಲ್ಲದ ರುಂಡವನ್ನು ತೆಗೆದುಕೊಂಡು ಹೋಗುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನುಮಾನದ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದು ಯಾರ ತಲೆ, ಯಾತಕ್ಕಾಗಿ ಈ ಕೊಲೆ ನಡೆದಿದೆ ಎಂಬುದರ ಕುರಿತಂತೆ ತನಿಖೆ ಆರಂಭಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular