ಅದಾನಿ ಸಮೂಹದ ಕುರಿತು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ‘ಹಿಂಡನ್ ಬರ್ಗ್’ ವರದಿ ಬಹಿರಂಗೊಂಡ ಬಳಿಕ ಕಂಪನಿಯ ಷೇರುಗಳ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಗೌತಮ್ ಅದಾನಿಯವರ ಸಂಪತ್ತಿನಲ್ಲೂ ಗಣನೀಯವಾಗಿ ಇಳಿಕೆಯಾಗಿದೆ.
ಇದರ ಮಧ್ಯೆ ಇಂಟರ್ನೆಟ್ ನಲ್ಲಿ ಉಚಿತ ಮಾಹಿತಿ ನೀಡುವ ಜಾಲತಾಣ ವಿಕಿಪೀಡಿಯ ಈಗ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ಒಂದು ದಶಕಕ್ಕೂ ಅಧಿಕ ಕಾಲದಿಂದ ಗೌತಮ್ ಅದಾನಿ ಅವರನ್ನು ವೈಭವೀಕರಿಸುವ ಬರಹಗಳನ್ನು ವಿಕಿಪೀಡಿಯಾದಲ್ಲಿ ಪ್ರಕಟಿಸಲಾಗಿತ್ತು. ಇದು ಗಮನಕ್ಕೆ ಬಂದ ಬಳಿಕ ತೆಗೆದು ಹಾಕಲಾಗಿತ್ತು ಎಂದು ಹೇಳಿಕೊಂಡಿದೆ.
ವಿಕಿಪೀಡಿಯಾದಲ್ಲಿ ಯಾರೂ ಬೇಕಾದರೂ ಬರಹಗಳನ್ನು ತಿದ್ದಿ ಉತ್ತಮಪಡಿಸಬಹುದಾಗಿದ್ದು ಇದನ್ನೇ ಬಳಸಿಕೊಂಡು ತಟಸ್ಥವಲ್ಲದ ಬರಹಗಳನ್ನು ಪ್ರಕಟಿಸಲಾಗಿತ್ತು. 40ಕ್ಕೂ ಅಧಿಕ ಮಂದಿ ಅಘೋಷಿತ ಎಡಿಟರ್ಗಳು ಅದಾನಿ ಕುಟುಂಬ ಮತ್ತು ವಹಿವಾಟಿಗೆ ಸಂಬಂಧಿಸಿದ ಹಲವು ಲೇಖಗಳನ್ನು ಸೃಷ್ಟಿಸಿದ್ದರು ಅಥವಾ ಪರಿಷ್ಕರಿಸಿದ್ದರು ಎಂದು ತಿಳಿಸಿದೆ.