ಬೆರಗಾಗಿಸುವಂತಿದೆ KSRTC ‘ಅಂಬಾರಿ ಉತ್ಸವ’ ದಲ್ಲಿರುವ ಐಷಾರಾಮಿ ಸೌಲಭ್ಯ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ದೂರದ ಪ್ರಯಾಣಕ್ಕೆ ಅನುಕೂಲವಾಗುವಂತೆ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಬಸ್ ಖರೀದಿಸಿದ್ದು, ಮೊದಲ ಹಂತದಲ್ಲಿ 15 ಬಸ್ ಗಳು ಸಂಚಾರಕ್ಕೆ ಸಿದ್ಧವಾಗಿವೆ. ಮಂಗಳವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದಕ್ಕೆ ಚಾಲನೆ ನೀಡಿದ್ದಾರೆ.

‘ಅಂಬಾರಿ ಉತ್ಸವ’ ಎಂಬ ಹೆಸರಿನ ಬಸ್ಸಿಗೆ ಸಂಭ್ರಮದ ಪ್ರಯಾಣ ಎಂಬ ಟ್ಯಾಗ್ಲೈನ್ ನೀಡಲಾಗಿದ್ದು, ಪ್ರತಿ ಬಸ್ಸಿನಲ್ಲೂ 40 ಸ್ಲೀಪರ್ ಆಸನಗಳು ಇರುತ್ತವೆ. ಅಲ್ಲದೆ ಬೇಕೆನಿಸಿದಾಗ ಕುಳಿತುಕೊಳ್ಳಲು ಹೆಡ್ ರೂಂ ಜೊತೆಗೆ ಹೊರಗಿನ ದೃಶ್ಯ ಸವಿಯಲು ವಿಶಾಲವಾದ ಫ್ಯಾನೊರಮಿಕ್ ಕಿಟಕಿ ಸಹ ಈ ಬಸ್ಸಿನಲ್ಲಿದೆ.

15 ಮೀಟರ್ ಉದ್ದವಿರುವ ವೋಲ್ವೋ ಕಂಪನಿಯ ಈ ಬಸ್ ಅತ್ಯಂತ ಸುರಕ್ಷಿತ ಜೊತೆಗೆ ಪರಿಸರ ಕಾಳಜಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಒಟ್ಟು 50 ಬಸ್ ಗಳನ್ನು ಖರೀದಿಸಲು ನಿಗಮ ಮುಂದಾಗಿದ್ದು, ಈಗ ಬಂದಿರುವ 15 ಬಸ್ಸುಗಳು ಬೆಂಗಳೂರಿನಿಂದ ಸಿಕಂದರಾಬಾದ್, ಹೈದರಾಬಾದ್, ಎರ್ನಾಕುಲಂ, ತಿರುವನಂತಪುರಂ, ತ್ರಿಶೂರ್, ಪಣಜಿ, ಮಂಗಳೂರು ಹಾಗೂ ಮಂಗಳೂರಿನಿಂದ ಪೂನಾಗೆ ಸಂಚರಿಸಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read