ವಿಡಿಯೋ ಮಾಡ್ತಿರೋ ಡ್ರೋಣ್ ಮೇಲೆ ಮೊಸಳೆ ಅಟ್ಯಾಕ್: ಆಮೇಲೆ ಆಗಿದ್ದು ಮಾತ್ರ ಅದ್ಭುತ…! 21-02-2023 5:02PM IST / No Comments / Posted In: Latest News, Live News, International ಮೊಸಳೆ…… ನೀರ ಮಧ್ಯದಲ್ಲಿ ಸೈಲೆಂಟ್ ಆಗಿ ತೇಲ್ತಾ ತೇಲ್ತಾನೇ, ವೈಲೆಂಟ್ ಆಗಿ ಎದುರಾಳಿಯನ್ನ ಟಾರ್ಗೆಟ್ ಮಾಡುವ ಜೀವಿ, ಮೊಸಳೆಗಳು ನೀರಿನೊಳಗಷ್ಟೇ ಅಲ್ಲ, ನೀರ ಹೊರಗೆಯೂ ವಾಸಿಸುವ ಬದುಕಬಲ್ಲ ಉಭಯವಾಸಿ ಜೀವಿಗಳು. ಇದೇ ಮೊಸಳೆಯೊಂದರ ಅದ್ಭುತವಾದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಮರೋನ್ಎಕ್ಸ್ಪ್ಲೋರ್ ಅನ್ನೋ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಶೀರ್ಷಿಕೆಯಲ್ಲಿ ‘ಇದೊಂದು ಅದ್ಭುತ ದಾಳಿ, ಈ ವಿಡಿಯೋ ನೋಡ್ತಿದ್ರೆ, ಇವುಗಳನ್ನು ಕೆಣಕೋದಿರಲಿ ಇವುಗಳ ಹತ್ತಿರಕ್ಕೂ ಹೋಗೋ ಧೈರ್ಯ ಯಾರೂ ಮಾಡ್ಲಿಕ್ಕಿಲ್ಲ. ಡ್ರೋಣ್ನಿಂದ ರೆಕಾರ್ಡ್ ಮಾಡಲಾಗಿರುವ ಈ ವಿಡಿಯೋ ನೋಡ್ಬಿಟ್ರೆ ನಿಮಗೂ ಅರ್ಥವಾಗುತ್ತೆ’ ಎಂದು ಬರೆಯಲಾಗಿದೆ. ಇಲ್ಲಿ ಡ್ರೋಣ್ ಕ್ಯಾಮರಾ ಒಂದು ಈ ಮೊಸಳೆ ಹತ್ತಿರಕ್ಕೆ ಹೋಗಿ ವಿಡಿಯೋ ರೆಕಾರ್ಡ್ ಮಾಡೋದಕ್ಕೆ ಶುರು ಮಾಡಿದೆ. ಅದನ್ನ ಗಮನಿಸಿದ ಮೊಸಳೆ ಒಮ್ಮಿಂದೊಮ್ಮೆಲೆ, ನೀರಿನಿಂದ ಮೇಲೆ ಹಾರಿ ಡ್ರೋಣ್ ಕ್ಯಾಮರಾವನ್ನ ಕಚ್ಚಿ ಹಿಡಿಯೊದಕ್ಕೆ ಪುಯತ್ನ ಪಟ್ಟಿದೆ. ಆದರೆ ಆ ಹೊತ್ತಿಗಾಗಲೇ ಇನ್ನೊಂದು ಕ್ಯಾಮರಾದಿಂದ ಮೊಸಳೆ, ಮೇಲೆ ಹಾರಿದ ವಿಡಿಯೋವನ್ನ ರೆಕಾರ್ಡ್ ಮಾಡಲಾಗಿದೆ. ಇದೇ ವಿಡಿಯೋವನ್ನ ನೋಡಿ ನೆಟ್ಟಿಗರು ಈಗ ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಪಕ್ಷಿಯಂತೆ ಗಗನದೆತ್ತರಕ್ಕೆ ಹಾರೋ ಡ್ರೋಣ್ ಕ್ಯಾಮರಾದಿಂದ, ಅನೇಕ ಅದ್ಭುತ ವಿಡಿಯೋಗಳನ್ನು ಸೆರೆ ಹಿಡಿಯಲಾಗುತ್ತೆ. ಕೆಲ ವನ್ಯಜೀವಿ ಛಾಯಾಗ್ರಾಹಕರು ಡೋಣ್ ಕ್ಯಾಮರಾ ಸಹಾಯದಿಂದ ಪ್ರಾಣಿಗಳ ಚಲನವಲನದ ವಿಡಿಯೋ ಮಾಡುತ್ತಾರೆ. ಅದೇ ರೀತಿ ಇಲ್ಲಿ ನೀರಿನಲ್ಲಿರುವ ಮೊಸಳೆಯ ಮೇಲೆ ಡ್ರೋಣ್ ಕ್ಯಾಮರಾದ ಮೂಲಕ ಕಣ್ಣಿಟ್ಟಿದ್ದಾರೆ. ಆದರೆ ಮೊಸಳೆಗೆ ಏನು ಗೊತ್ತು ಅದು ಕ್ಯಾಮರಾ ಅಂತ. ಅದು ಪಕ್ಷಿ ಅಂತ ಅಂದುಕೊಂಡು ಕ್ಯಾಮರಾ ಮೇಲೆಯೇ ಅಟ್ಯಾಕ್ ಮಾಡಿದೆ. ಒಂದೇ ಒಂದು ಇಂಚಿನ ದೂರದಿಂದಾಗಿ ಕ್ಯಾಮರಾ ಸೇಫ್ ಆಗಿದೆ. ಇಲ್ಲವಾದಲ್ಲಿ ಇದೇ ಮೊಸಳೆಯ ಹಲ್ಲಿಗೆ ಸಿಕ್ಕಾಕಿಕೊಂಡು ಪುಡಿಪುಡಿಯಾಗಿರೋದು. ಈ ವಿಡಿಯೋವನ್ನ ಒಂದು ಮಿಲಿಯನ್ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದವರೆಲ್ಲ ಮೊಸಳೆ ಹಾರಿರುವ ಪರಿಗೆ ಹಾಗೂ ಕ್ಯಾಮರಾ ಜಸ್ಟ್ ಮಿಸ್ ಆಗಿ ಸೇಫ್ ಆಗಿರೋದನ್ನ ನೋಡಿ ಶಾಕ್ ಆಗಿದ್ದಾರೆ. That was a close call! Crocs are awesome, intimidating creatures that you don't want to mess with. Interested to see the footage captured by that drone – has anyone come across it?Credit: wildlifeanimall (IG)#nature #wildlife #drone pic.twitter.com/4o4SLF0R4N — AT (@reach_anupam) February 19, 2023