ಟೈಟಾನಿಕ್ ಹಡಗು ಯಾರಿಗೆ ಗೊತ್ತಿಲ್ಲ ಹೇಳಿ. 1912 ದುರಂತ ಅಂತ್ಯ ಕಂಡುಕೊಂಡಿದ್ದ ಹಡಗು. ದೈತ್ಯಾಕಾರದ ಹಿಮಗಡ್ಡೆಗೆ ಬಡಿದು, ಅಟ್ಲಾಂಟಿಕ್ ಮಹಾಸಾಗರದ ಮುಳುಗಿ ಹೋದ ಹಡಗು ಇದು.
ಈ ಘಟನೆ ನಡೆದು ಆಗಲೇ 107 ವರ್ಷ ಕಳೆದಿವೆ. ಆ ಘಟನೆಯನ್ನ ಮತ್ತೆ ಮರುಕಳಿಸುವಂತೆ ಮಾಡಿದ್ದು ಇತ್ತಿಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ’ನೌ ದಿಸ್ ನ್ಯೂಸ್ ’ ಅನ್ನೊ ಅಕೌಂಟ್‌ನಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೋ.
ಬ್ರಿಟನ್‌ನ ಈ ಹಡಗಿನ ಅವಶೇಷಗಳು ಅಟ್ಲಾಂಟಿಕ್ ಮಹಾಸಾಗರದ ನೆಲದ ಮೇಲೆ, ಸಮುದ್ರದ ಮೇಲ್ಮೈಯಿಂದ ಸುಮಾರು 3ಕಿ.ಮಿ ಆಳದಲ್ಲಿ ಬಿದ್ದಿರುವುದು ಈ ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಅಮೆರಿಕಾದ ವುಡ್ಸೋಹಲ್ ಓಶಿಯಾನೊಗ್ರಾಫಿಕ್ ಇನ್ಸ್‌ಟಿಟ್ಯೂಷನಲ್ಡ್ ಬ್ಲೂಚ್ ಒಐನ ತಂಡ 1986ರ ಸೆಪ್ಟೆಂಬರ್ 1ರಂದು ಡಬ್ಲ್ಯುಎಚ್ಒಐ ಮತ್ತು ಫ್ರೆಂಚ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಓಶಿಯಾನೊಗ್ರಫಿಯ ತಂಡ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನೀರಿನಡಿಯ ಕ್ಯಾಮರಾ ಬಳಸಿ ಟೈಟಾನಿಕ್ ನ ಅವಶೇಷಗಳನ್ನು ಸಮುದ್ರದ ತಳಭಾಗದಲ್ಲಿ 12,400 ಅಡಿಗಳಷ್ಟು ಕೆಳಗೆ ಪತ್ತೆಹಚ್ಚಲಾಗಿದೆ.
ಇದೀಗ ಜೇಮ್ಸ್ ಕ್ಯಾಮರೂನ್ ಅವರ ನಿರ್ದೇಶನದಲ್ಲಿ 1997ರಲ್ಲಿ ಬಿಡುಗಡೆಗೊಂಡಿದ್ದ ಟೈಟಾನಿಕ್ ಸಿನೆಮಾವನ್ನು ಮರುಬಿಡುಗಡೆಗೊಳಿಸುವ ಸಂದರ್ಭದಲ್ಲಿ ಟೈಟಾನಿಕ್ ಅಪರೂಪದ ಅವಶೇಷಗಳನ್ನು ಬಿಡಗಡೆಗೊಳಿಸಲಾಗುತ್ತಿದೆ.
ಟೈಟಾನಿಕ್ ಹಡಗಿಗೆ 110 ವರ್ಷಗಳು ಕಳೆದಿವೆ. ಟೈಟಾನಿಕ್ ಹಡಗಿನ ಕುರಿತಾಗಿ ಜನರು ಇನ್ನೂ ಕುತೂಹಲವನ್ನ ಇಟ್ಟುಕೊಂಡಿದ್ದಾರೆ. ಈ ಹಡಗಿನ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಲೇ ಇವೆ. ಇದನ್ನೆಲ್ಲ ಬಂಡವಾಳವನ್ನಾಗಿಟ್ಟುಕೊಂಡು ಈಗ ಖಾಸಗಿ ಕಂಪನಿಯೊಂದು ಈ ಹಡಗನ್ನ ತೋರಿಸಿ ಹಣ ಮಾಡಲು ಮುಂದಾಗಿದೆ. ಈ ಕಂಪನಿ ಈಗಾಗಲೇ ಹಡಗಿನ ವಿಡಿಯೋವನ್ನ ಬಿಡುಗಡೆ ಮಾಡಿ ಲಕ್ಷಾಂತರ ಜನ ಈ ವಿಡಿಯೋ ನೋಡಿ, ಥ್ರಿಲ್ ಆಗಿದ್ದಾರೆ.