2019ರಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆ ಮಧ್ಯಪ್ರದೇಶ ಮೂಲದ 44 ವರ್ಷದ ರಾಜು ಪಿಂಡಾರೆ ಎಂಬುವರನ್ನು ಈಗ ಬಿಡುಗಡೆ ಮಾಡಲಾಗಿದೆ.
ಮಾನಸಿಕ ಅಸ್ವಸ್ಥರಾಗಿದ್ದ ಮಧ್ಯಪ್ರದೇಶದ ಇಂದ್ವಾಡಿ ನಿವಾಸಿ ರಾಜು ಪಿಂಡಾರೆ ಐದು ವರ್ಷಗಳ ಹಿಂದೆ ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ಪ್ರವೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದ ಪಾಕಿಸ್ತಾನ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಇದ್ಯಾವುದರ ಮಾಹಿತಿ ರಾಜು ಪಿಂಡಾರೆ ಕುಟುಂಬಕ್ಕೆ ಇರಲಿಲ್ಲ.
ಬಳಿಕ ಭಾರತೀಯ ಪೊಲೀಸರು ತಿಳಿಸಿದ ಬಳಿಕವಷ್ಟೇ ಕುಟುಂಬಸ್ಥರ ಗಮನಕ್ಕೆ ಬಂದಿದ್ದು, ಮಾನಸಿಕ ಅಸ್ವಸ್ಥರಾಗಿರುವ ಕುರಿತು ಸೂಕ್ತ ಸಾಕ್ಷ್ಯಾಧಾರ ಸಲ್ಲಿಸಿದ್ದರು.
ಇದೀಗ ರಾಜು ಪಿಂಡಾರೆ ಅವರನ್ನು ವಾಘಾ ಗಡಿಯಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿದ್ದು, ಸಂಪೂರ್ಣ ವಿಚಾರಣೆ ಬಳಿಕ ಕುಟುಂಬಸ್ಥರ ಬಳಿ ಕಳುಹಿಸಿಕೊಡಲಾಗುತ್ತದೆ.