alex Certify ಸೂಪ್‌ ಮತ್ತು ಸಲಾಡ್‌ ಅನ್ನು ಈ ರೀತಿ ಸೇವಿಸುವುದು ಅಪಾಯಕಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪ್‌ ಮತ್ತು ಸಲಾಡ್‌ ಅನ್ನು ಈ ರೀತಿ ಸೇವಿಸುವುದು ಅಪಾಯಕಾರಿ….!

ಸೂಪ್‌ ಮತ್ತು ಸಲಾಡ್‌ ಇವೆರಡೂ ಅತ್ಯಂತ ಆರೋಗ್ಯಕರ ಆಹಾರಗಳು. ಜೀರ್ಣಕ್ರಿಯೆಯನ್ನು ಸುಧಾರಿಸಬಲ್ಲ ಪದಾರ್ಥಗಳಿವು. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವವರಂತೂ ಸಾಮಾನ್ಯವಾಗಿ ಸೂಪ್ ಅಥವಾ ಸಲಾಡ್ ಅನ್ನು ಸೇವಿಸುತ್ತಾರೆ.

ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಸೂಪ್‌ ಮತ್ತು ಸಲಾಡ್‌ ಸೇವನೆ ವೇಳೆ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಲಾಭದ ಬದಲು ನಷ್ಟ ಉಂಟಾಗುತ್ತದೆ.

ತಜ್ಞರ ಅಭಿಪ್ರಾಯವೇನು ?

ಆಹಾರ ತಜ್ಞರ ಪ್ರಕಾರ ಸಲಾಡ್ ಮತ್ತು ಸೂಪ್‌ಗಳು ಆರೋಗ್ಯಕರ. ಆದರೆ ಅವುಗಳನ್ನು ತಿನ್ನುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮುಖ್ಯ ಊಟದಂತೆ ಸಲಾಡ್ ಮತ್ತು ಸೂಪ್ ತಿನ್ನಬೇಡಿ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟ ಈ ರೀತಿ ನೀವು ಯಾವುದೇ ಸಮಯದಲ್ಲಿ ಸಲಾಡ್ ಮತ್ತು ಸೂಪ್ ಅನ್ನು ತಿನ್ನಬಹುದು, ಆದರೆ ಇದು ಸಮತೋಲಿತ ಊಟವಲ್ಲ ಎಂದು ಅರ್ಥಮಾಡಿಕೊಳ್ಳಿ.  ಆದ್ದರಿಂದ ಇದನ್ನು ಮುಖ್ಯ ಊಟವಾಗಿ ಸೇವಿಸಬೇಡಿ, ಪರ್ಯಾಯವಾಗಿ ಬಳಸಿ.

ಸಲಾಡ್ ಅಥವಾ ಸೂಪ್, ರೊಟ್ಟಿ, ದಾಲ್, ಅನ್ನ ಮತ್ತು ಪಲ್ಯಗಳಿಗೆ ಎಂದಿಗೂ ಪರ್ಯಾಯವಾಗಿರುವುದಿಲ್ಲ. ಏಕೆಂದರೆ ಸಂಪೂರ್ಣ ಆಹಾರಕ್ರಮವನ್ನು ಅನುಸರಿಸಬೇಕು. ಸೂಪ್ ಮತ್ತು ಸಲಾಡ್ ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ತೂಕವನ್ನು ವೇಗವಾಗಿ ಕಳೆದುಕೊಳ್ಳಲು ಬಯಸುವವರು ದೈನಂದಿನ ಆಹಾರದಲ್ಲಿ ಸೂಪ್ ಮತ್ತು ಸಲಾಡ್ ಅನ್ನು ಸೇವಿಸಬೇಕು.

ಆರೋಗ್ಯಕರ ಸೂಪ್‌ನಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿರುತ್ತದೆ. ಹಾಗಾಗಿ ತೂಕ ಇಳಿಸುವುದು ಸುಲಭವಾಗುತ್ತದೆ.ಸೂಪ್‌ನಲ್ಲಿ ಸಕ್ಕರೆ, ಬೆಣ್ಣೆಯಂತಹ ವಸ್ತುಗಳನ್ನು ಬೆರೆಸಬೇಡಿ. ಇವನ್ನೆಲ್ಲ ಹಾಕಿದರೆ  ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ಹಸಿರು ತರಕಾರಿಗಳು, ಬೀನ್ಸ್, ಚೀಸ್ ಮತ್ತು ಮೊಟ್ಟೆಗಳನ್ನು ಸೇರಿಸಬಹುದು. ಜೊತೆಗೆ ನಿಂಬೆ ರಸವನ್ನು ಸೇರಿಸಿದರೆ ಪೌಷ್ಟಿಕಾಂಶದ ಮೌಲ್ಯವು ಹೆಚ್ಚಾಗುತ್ತದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...