ನಮ್ಮ ಮನೆ ಮಕ್ಕಳನ್ನು ಯಾಕೆ ಉಗ್ರರನ್ನಾಗಿ ಮಾಡಲು ಹೊರಟಿದ್ದೀಯ; ಸಾಧ್ವಿ ಪ್ರಜ್ಞಾಸಿಂಗ್ ವಿರುದ್ಧ ಏಕವಚನದಲ್ಲಿ ಹರಿಪ್ರಸಾದ್ ವಾಗ್ದಾಳಿ

ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್, ದೇಶದ ಹಾಗೂ ಧರ್ಮದ ರಕ್ಷಣೆಗೆ ನಾವು ಸದಾ ಸಿದ್ದರಾಗಬೇಕಿದೆ. ಹಾಗೆಯೇ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಯಾರಾದರೂ ಸಮಸ್ಯೆ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದ್ದರು.

ಸಾಧ್ವಿ ಪ್ರಜ್ಞಾಸಿಂಗ್ ಅವರ ಹೇಳಿಕೆ ಕುರಿತಂತೆ ಏಕವಚನದಲ್ಲಿ ಕಿಡಿ ಕಾರಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಶಿವಮೊಗ್ಗ ಕ್ಷೇತ್ರಕ್ಕೆ ಪ್ರಜ್ಞಾಸಿಂಗ್ ಠಾಕೂರ್ ಬಂದಿದ್ದಾಳೆ. ಈಕೆ ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿ ಇದ್ದವಳು ಎಂದು ವಾಗ್ದಾಳಿ ನಡೆಸಿದರು.

ಕುಂದಾಪುರ ತಾಲೂಕಿನ ಕಿರಿ ಮಂಜೇಶ್ವರದಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಈಕೆ ಭಾಷಣ ಮಾಡುವಾಗ ಚಾಕು ಚೂರಿಯನ್ನು ಮನೆಯಲ್ಲಿ ಇಟ್ಟುಕೊಳ್ಳಿ ಎಂದು ಹೇಳುತ್ತಾಳೆ. ನಮ್ಮ ಮನೆ ಮಕ್ಕಳನ್ನು ಯಾಕೆ ಉಗ್ರರನ್ನಾಗಿ ಮಾಡಲು ನೀನು ಹೊರಟಿದ್ದೀಯ ಎಂದು ಪ್ರಶ್ನಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read