alex Certify ಟರ್ಕಿ ಭೂಕಂಪದ ಬಳಿಕ ರಕ್ಷಕನನ್ನು ಬಿಟ್ಟುಹೋಗದ ಬೆಕ್ಕು; ಮನಮುಟ್ಟುವ ಪೋಸ್ಟ್ ಗೆ ಭಾರೀ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟರ್ಕಿ ಭೂಕಂಪದ ಬಳಿಕ ರಕ್ಷಕನನ್ನು ಬಿಟ್ಟುಹೋಗದ ಬೆಕ್ಕು; ಮನಮುಟ್ಟುವ ಪೋಸ್ಟ್ ಗೆ ಭಾರೀ ಮೆಚ್ಚುಗೆ

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪವು ಈಗಾಗಲೇ 46,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಸಾವಿನ ಸಂಖ್ಯೆಯು ಪ್ರತಿ ದಿನ ಹೆಚ್ಚುತ್ತಿದೆ.

ಟರ್ಕಿಯಲ್ಲಿ ಸುಮಾರು 2,64,000 ಅಪಾರ್ಟ್‌ಮೆಂಟ್‌ಗಳು ಭೂಕಂಪಗಳಿಂದ ಹಾನಿಗೊಳಗಾಗಿವೆ ಮತ್ತು ಅವಶೇಷಗಳಡಿಯಲ್ಲಿ ಜನರನ್ನು ಹುಡುಕುವುದು ರಕ್ಷಕರಿಗೆ ದೊಡ್ಡ ಸವಾಲಾಗಿದೆ.  ಆದರೆ, ಅವರು ಜೀವ ಉಳಿಸಲು ನಿರಂತರ ಕಾರ್ಯಾಚರಣೆಯಲ್ಲಿದ್ದಾರೆ.

ಇಂತಹ ಪ್ರಯತ್ನದಲ್ಲಿ ಕೆಲವು ದಿನಗಳ ಹಿಂದೆ, ಮರ್ಡಿನ್ ಅಗ್ನಿಶಾಮಕ ದಳದ ಸದಸ್ಯರು ಬೆಕ್ಕನ್ನು ರಕ್ಷಿಸಿದರು. ಆದರೆ ಈಗ ಆ ಬೆಕ್ಕು ತನ್ನನ್ನು ರಕ್ಷಿಸಿದ ವ್ಯಕ್ತಿಯನ್ನು ಬಿಟ್ಟು ಹೋಗ್ತಿಲ್ಲ. ಇಂತಹ ಹೃದಯಸ್ಪರ್ಶಿ ಸುದ್ದಿ ಹೃದಯ ತುಂಬಿಸಿದೆ.

ಈ ಸುದ್ದಿಯನ್ನು ಉಕ್ರೇನ್‌ ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರು ಫೆಬ್ರವರಿ 16 ರಂದು ಬೆಕ್ಕನ್ನು ರಕ್ಷಣೆ ಮಾಡಿದ್ದ ವಿಡಿಯೋ ಪೋಸ್ಟ್ ಮಾಡಿದ್ದರು. ಅದರಲ್ಲಿ ರಕ್ಷಕನ ಭುಜದ ಮೇಲೆ ಕುಳಿತು ಅವನ ಮುಖವನ್ನ ಬೆಕ್ಕು ಮುದ್ದಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು.

ಅವರು ಬೆಕ್ಕಿನ ಬಗ್ಗೆ ಮತ್ತೊಂದು ವಿಷಯವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಬೆಕ್ಕನ್ನು ಈಗ ರಕ್ಷಕರು ಸ್ವತಃ ದತ್ತು ಪಡೆದಿದ್ದಾರೆ ಎಂದು ಹೇಳಿದ್ದಾರೆ.

“ತನ್ನ ರಕ್ಷಕನ ಕಡೆಯಿಂದ ಹೊರಬರಲು ನಿರಾಕರಿಸಿದ ಟರ್ಕಿಯಲ್ಲಿನ ಅವಶೇಷಗಳಿಂದ ರಕ್ಷಿಸಲ್ಪಟ್ಟ ಬೆಕ್ಕಿನ ಬಗ್ಗೆ ನಾನು ನಿನ್ನೆ ಪೋಸ್ಟ್ ಮಾಡಿದ್ದೇನೆ. ರಕ್ಷಕನ ಹೆಸರು ಅಲಿ ಕಾಕಾಸ್ ಮತ್ತು ಅವನು ಬೆಕ್ಕನ್ನು ದತ್ತು ತೆಗೆದುಕೊಂಡರು. ಅದಕ್ಕೆ ಟರ್ಕಿಶ್ ಭಾಷೆಯಲ್ಲಿ ಎಂಕಾಜ್ – “ರಾಬಲ್” ಎಂದು ಹೆಸರಿಟ್ಟರು. ಅವರು ಒಟ್ಟಿಗೆ ಸಂತೋಷದ ಜೀವನವನ್ನು ನಡೆಸಲಿ !” ಎಂದು ಬರೆದಿದ್ದಾರೆ.

— Anton Gerashchenko (@Gerashchenko_en) February 16, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...