alex Certify ಬದನೆಕಾಯಿಯಲ್ಲಿದೆ ಆರೋಗ್ಯದ ರಹಸ್ಯ; ನಿಯಮಿತವಾದ ಸೇವನೆಯಿಂದ ಪಡೆಯಿರಿ ಇಷ್ಟೆಲ್ಲಾ ಲಾಭ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದನೆಕಾಯಿಯಲ್ಲಿದೆ ಆರೋಗ್ಯದ ರಹಸ್ಯ; ನಿಯಮಿತವಾದ ಸೇವನೆಯಿಂದ ಪಡೆಯಿರಿ ಇಷ್ಟೆಲ್ಲಾ ಲಾಭ….!

ಬದನೆ ಬಹಳ ಸಾಮಾನ್ಯವಾದ ತರಕಾರಿ. ಕೆಲವರು ಬದನೆಕಾಯಿಯ ರುಚಿಯನ್ನು ಇಷ್ಟಪಡುವುದಿಲ್ಲ. ಬದನೆಕಾಯಿಯಿಂದ ಅನೇಕ ಬಗೆಯ ಭಕ್ಷ್ಯಗಳನ್ನು ಮಾಡಬಹುದು. ಬದನೆಕಾಯಿಯ ಭರ್ತ ಎಂಬ ಪಲ್ಯವಂತೂ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧವಾಗಿದೆ. ತಿಳಿ ಹಸಿರು, ನೇರಳೆ ಮತ್ತು ಬಿಳಿ ಬಣ್ಣದ ಬದನೆಕಾಯಿಯನ್ನು ಬೆಳೆಯಲಾಗುತ್ತದೆ.

ಬದನೆಕಾಯಿ ಕೇವಲ ರುಚಿಗೆ ಮಾತ್ರವಲ್ಲ ಇದರಲ್ಲಿ ಆರೋಗ್ಯದ ಅನೇಕ ರಹಸ್ಯಗಳು ಅಡಗಿವೆ. ಅದಕ್ಕಾಗಿಯೇ ಇದನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಈ ಅದ್ಭುತ ತರಕಾರಿಯ ಪ್ರಯೋಜನಗಳ ಬಗ್ಗೆ ತಿಳಿದುಕೊಂಡರೆ ಅದನ್ನು ತಿನ್ನಲು ಯಾರೂ ನಿರಾಕರಿಸುವುದಿಲ್ಲ.

ಬದನೆಯನ್ನು ಪೋಷಕಾಂಶಗಳ ಪವರ್ ಹೌಸ್ ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ ಇರುತ್ತವೆ. ವಿಟಮಿನ್‌, ಫೈಬರ್, ಮೆಗ್ನೀಸಿಯಮ್, ನಿಯಾಸಿನ್‌ನಂತಹ ಅನೇಕ ಪೋಷಕಾಂಶಗಳು ಬದನೆಯಲ್ಲಿವೆ. ಇದನ್ನು ನಿತ್ಯ ಸೇವಿಸುವವರಿಗೆ ಸಾಕಷ್ಟು ಆರೋಗ್ಯ ಲಾಭಗಳು ಸಿಗುತ್ತವೆ. ಬದನೆಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಹೇರಳವಾಗಿ ಕಂಡುಬರುತ್ತವೆ. ಇದು ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಬದನೆಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿದ್ದು, ತೂಕ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಜೊತೆಗೆ ಹೃದಯವನ್ನು ಆರೋಗ್ಯವಾಗಿಡುತ್ತದೆ. ಬದನೆಕಾಯಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸಲ್ ಕಾಯಿಲೆಯಂತಹ ಮಾರಣಾಂತಿಕ ಕಾಯಿಲೆಗಳನ್ನು ತಡೆಗಟ್ಟಬಹುದು.

ಡಯಾಬಿಟಿಸ್ ರೋಗಿಗಳು ತಮ್ಮ ಡಯಟ್‌ನಲ್ಲಿ ಬದನೆಯನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ಇದು ಫೈಬರ್‌ನ ಸಮೃದ್ಧ ಮೂಲವಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಫೈಬರ್ ಇರುವ ಕಾರಣ, ಸಕ್ಕರೆಯ ಜೀರ್ಣಕ್ರಿಯೆ ಉತ್ತಮವಾಗುತ್ತದೆ ಮತ್ತು ಹೀರುವಿಕೆ ನಿಧಾನವಾಗುತ್ತದೆ. ಬದನೆಕಾಯಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...