
ನಿನ್ನೆ ಬಜೆಡ್ ಮಂಡನೆಯ ವೇಳೆ ಅಧಿವೇಶನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕಿವಿ ಮೇಲೆ ಚಂಡೂವ ಇಟ್ಟುಕೊಂಡು ಬಂದು ಬಿಜೆಪಿ ಸರ್ಕಾರ ಜನರ ಕಿವಿ ಮೇಲೇ ಹೂವಿಡುತ್ತಿದೆ ಎಂದು ಪ್ರತಿಭಟಿಸಿದ್ದರು.
ಇದೀಗ ಕಾಂಗ್ರೆಸ್ ಕಾರ್ಯಕರ್ತರು ಸಾಕಪ್ಪ ಸಾಕು ಕಿವಿ ಮೇಲೇ ಹೂವು ಎಂದು ಬೆಂಗಳೂರು, ಮೈಸೂರಿನಲ್ಲಿ ಪೋಸ್ಟರ್ ಗಳನ್ನು ಅಂಟಿಸಿದ್ದು, ಪೋಸ್ಟರ್ ಗಳ ಮೇಲೆ ಹೂವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

