
ಬಜೆಟ್ ಮಂಡನೆಗೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಜನಸ್ನೇಹಿ ಬಜೆಟ್ ಮಂಡಿಸಲಿದ್ದೇನೆ. ಇಂದು ಮಂಡಿಸುವ ಬಜೆಟ್ ಜನಸ್ನೇಹಿಯಾಗಿರಲಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ವಿಶೇಷವಾಗಿ ಮಹಿಳೆಯರಿಗೆ ಸಹಯವಾಗುವಂತೆ ಬಜೆಟ್ ಯೋಜನೆ ರೂಪಿಸಲಾಗಿದೆ. ರೈತಾಪಿ ಜನರಿಗೆ, ಮಹಿಳೆಯರಿಗೆ, ದೀನದಲಿತರು, ಸಾಮಾನ್ಯ ಜನರಿಗೆ ಪೂರಕ ಬಜೆಟ್ ಇದಾಗಿರಲಿದೆ ಎಂದರು.

