ಎಲ್ಲ ಹಬ್ಬಗಳಲ್ಲಿ ಶ್ರೇಷ್ಠವಾದ ಶಿವರಾತ್ರಿ ಉತ್ಸವ ಫೆಬ್ರವರಿ 18 ರಂದು ಬಂದಿದೆ. ದೇಶದಾದ್ಯಂತ ಶಿವನ ಆರಾಧನೆಯಲ್ಲಿ ಭಕ್ತರು ನಿರತರಾಗಲಿದ್ದಾರೆ. ವೃತ ಮಾಡಿ, ಉಪವಾಸ ಮಾಡಿ ಶಿವನ ಧ್ಯಾನದಲ್ಲಿ ಜಾಗರಣೆ ಮಾಡಲಿದ್ದಾರೆ.
ವೃತ, ಶಿವನ ಪೂಜೆಗೂ ಮೊದಲು ಕೆಲವೊಂದು ವಿಷಯಗಳ ಬಗ್ಗೆ ಭಕ್ತರು ತಿಳಿದುಕೊಳ್ಳಬೇಕಾಗುತ್ತದೆ. ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತ ಶಿವಲಿಂಗಕ್ಕೆ ಜಲವನ್ನು ಅರ್ಪಣೆ ಮಾಡಿ. ಇದ್ರಿಂದ ಸ್ವಭಾವದಲ್ಲಿ ಕಂಡು ಬರುವ ವಿಕಾರ ಶಾಂತವಾಗಲಿದೆ.
ಕೇಸರಿಯನ್ನು ಶಂಕರನಿಗೆ ಅರ್ಪಣೆ ಮಾಡುವುದರಿಂದ ಸಭ್ಯತೆ ಹಾಗೂ ಶಿಷ್ಟತೆ ಪ್ರಾಪ್ತವಾಗಲಿದೆ.
ಸಕ್ಕರೆ ಅರ್ಪಣೆ ಮಾಡುವುದರಿಂದ ಆರ್ಥಿಕ ಸಮಸ್ಯೆಗೆ ಮುಕ್ತಿ ಸಿಗಲಿದೆ.
ಹಾಲನ್ನು ಶಿವನಿಗೆ ನೀಡುವುದರಿಂದ ಶರೀರ, ಆರೋಗ್ಯದಿಂದ ಕೂಡಿರುತ್ತದೆ.
ಮೊಸರು ಅರ್ಪಣೆ ಮಾಡುವುದರಿಂದ ಸಮಸ್ಯೆಗಳು ದೂರವಾಗುತ್ತವೆ.
ತುಪ್ಪ ಅರ್ಪಿಸುವುದರಿಂದ ಶಕ್ತಿ ಹೆಚ್ಚಾಗುತ್ತದೆ.
ಸಮಾಜದಲ್ಲಿ ಘನತೆ ಹಾಗೂ ಗೌರವ ಗಳಿಸಲು ಚಂದನವನ್ನು ಶಿವನಿಗೆ ಅರ್ಪಿಸಬೇಕು.
ಜೇನುತುಪ್ಪ ಅರ್ಪಣೆ ಮಾಡುವುದರಿಂದ ಮಾತು ಸಿಹಿಯಾಗುತ್ತದೆ.
ಹಾಗೆ ಕೆಲವೊಂದು ವಸ್ತುಗಳನ್ನು ಮರೆತೂ ಶಿವನಿಗೆ ಅರ್ಪಣೆ ಮಾಡಬಾರದು.
ಶಾಸ್ತ್ರಗಳ ಅನುಸಾರ ಶಿವಲಿಂಗ ಪುರುಷತ್ವದ ಸೂಚನೆ. ಹಾಗಾಗಿ ಅರಿಶಿನ ಅರ್ಪಣೆ ನಿಷಿದ್ಧ.
ಶಿವಲಿಂಗಕ್ಕೆ ಕೆಂಪು ಬಣ್ಣದ ಬಟ್ಟೆ ಹಾಗೂ ಕೇತಕಿಯನ್ನು ಅರ್ಪಣೆ ಮಾಡಬಾರದು.
ಶಿವಲಿಂಗಕ್ಕೆ ಕುಂಕುಮ ನಿಷಿದ್ಧ.
ಶಿವನ ಪೂಜೆ ವೇಳೆ ಶಂಖವನ್ನು ಊದಬಾರದು.
ಶಿವಲಿಂಗಕ್ಕೆ ಅಥವಾ ಶಿವಪೂಜೆ ವೇಳೆ ತುಳಸಿಯನ್ನು ಬಳಸಬಾರದು.