HomeKarnatakaBIG NEWS: ಶಿಕ್ಷಕಿ ಪತ್ನಿಯನ್ನೇ ಕೊಲೆಗೈದ ಶಿಕ್ಷಕ

BIG NEWS: ಶಿಕ್ಷಕಿ ಪತ್ನಿಯನ್ನೇ ಕೊಲೆಗೈದ ಶಿಕ್ಷಕ

ಕಲಬುರ್ಗಿ: ಶಿಕ್ಷಕನೊಬ್ಬ ಪತ್ನಿ ಮೇಲಿನ ಅನುಮಾನಕ್ಕೆ ಆಕೆಯನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರ್ಗಿ ನಗರದ ಅಂಬಿಕಾ ನಗರದಲ್ಲಿ ನಡೆದಿದೆ.

39 ವರ್ಷದ ಫರೀದಾ ಬೇಗಂ ಪತಿಯಿಂದಲೇ ಹತ್ಯೆಯಾದ ಶಿಕ್ಷಕಿ. ಏಜಾಜ್ ಅಹ್ಮದ್ ಹಾಗೂ ಫರೀದಾ ಬೇಗಂ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮಕ್ಕಳು ಇದ್ದಾರೆ. ಪತ್ನಿ ಮೇಲೆ ಅನುಮಾನಗೊಂಡು ಪತಿ ಏಜಾಜ್ ಪತ್ನಿಯನ್ನು ಕೊಲೆಗೈದಿದ್ದಾನೆ.

ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ ಎಂದು ತಿಳುದುಬಂದಿದೆ. ಕಲಬುರ್ಗಿಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular