ಇದು ವಿಶ್ವದ ಅತ್ಯಂತ ಅಪಾಯಕಾರಿ ಶೌಚಾಲಯ; ಇಲ್ಲಿ ಬಂದವರು ಬೆಚ್ಚಿಬೀಳೋದು ಗ್ಯಾರಂಟಿ….!

ಸ್ವಚ್ಛವಾಗಿರುವ ಶೌಚಾಲಯವನ್ನು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಟಾಯ್ಲೆಟ್‌ ವಿನ್ಯಾಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಶೌಚಾಲಯದಲ್ಲೂ ಎಂತೆಂಥಾ ಪ್ರಯೋಗಗಳನ್ನು ಮಾಡಬಹುದು ಅನ್ನೋದಕ್ಕೆ ಇಲ್ಲೊಂದು ನಿದರ್ಶನವಿದೆ. ಅಪಾಯಕಾರಿ ಶಾರ್ಕ್‌ನಂತಿರೋ ಟಾಯ್ಲೆಟ್‌ ಒಂದು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಈ ಶೌಚಾಲಯದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಶೇರ್‌ ಮಾಡಿದ್ದಾರೆ. ಉದ್ಯಮಿ ಹರ್ಷ್ ಗೋಯೆಂಕಾ ಕೂಡ ಇದನ್ನು ಶೇರ್‌ ಮಾಡಿರೋದು ವಿಶೇಷ.

ಶೌಚಾಲಯದ ಡಿಸೈನ್‌ ನೋಡಿ ಅವರು ದಂಗಾಗಿದ್ದಾರಂತೆ. ಪುರುಷರು ಬಳಸುವ ಶೌಚಾಲಯ ಇದು, ಥೇಟ್‌ ಶಾರ್ಕ್ ಮೀನಿನ ವಿನ್ಯಾಸದಲ್ಲಿದೆ. ಶಾರ್ಕ್‌ ಮೀನು ದೊಡ್ಡದಾಗಿ ಬಾಯ್ತೆರೆದು ಕುಳಿತಂತೆ ಈ ಟಾಯ್ಲೆಟ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಥಟ್ಟನೆ ನೋಡಿದ್ರೆ ನಿಜವಾದ ಶಾರ್ಕ್‌ ಅಲ್ಲಿದೆಯೇನೋ ಎಂಬಷ್ಟು ನೈಜವಾಗಿದೆ ಈ ವಿನ್ಯಾಸ. ತೀರಾ ತರಾತುರಿಯಲ್ಲಿ ಟಾಯ್ಲೆಟ್‌ಗೆ ಬರುವವರು ಇದನ್ನು ನೋಡಿ ಭಯಪಟ್ಟುಕೊಂಡು ಓಡಿದ್ರೂ ಆಶ್ಚರ್ಯವಿಲ್ಲ.

ಶಾರ್ಕ್‌ ಆಕೃತಿಯ ಈ ಟಾಯ್ಲೆಟ್‌ಗೆ ಬಂದವರು ತಮ್ಮ ಉದ್ದೇಶವನ್ನೇ ಮರೆತುಬಿಡುತ್ತಾರೆ ಅಂತಾ ಕೆಲವರು ಕಮೆಂಟ್‌ ಮಾಡಿದ್ದಾರೆ. ಶೌಚಾಲಯಗಳ ವಿಚಿತ್ರ ಚಿತ್ರಗಳು ಮತ್ತು ವಿಡಿಯೋಗಳು ಮುನ್ನೆಲೆಗೆ ಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಪ್ರಪಂಚದಾದ್ಯಂತದ ಇಂತಹ ಅನೇಕ ಪ್ರಕರಣಗಳು ಮುಂಚೂಣಿಗೆ ಬಂದಿವೆ. ಮಲಗುವ ಕೋಣೆಗಿಂತಲೂ ಹೈಫೈ ಆಗಿರುವ ಶೌಚಾಲಯ, ಚಿನ್ನದಿಂದ ಮಾಡಿರೋ ಟಾಯ್ಲೆಟ್‌ ಸೀಟ್‌ ಕೂಡ ನೆಟ್ಟಿಗರನ್ನು ಸೆಳೆದಿದ್ದವು

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read