HomeCrimeಹುಡುಗಿಯರನ್ನು ಚುಡಾಯಿಸಬೇಡ ಎಂದಿದ್ದೆ ತಪ್ಪಾಯ್ತು....! ಬುದ್ಧಿ ಹೇಳಿದವನ ಅಪಹರಿಸಿ ಹತ್ಯೆ

ಹುಡುಗಿಯರನ್ನು ಚುಡಾಯಿಸಬೇಡ ಎಂದಿದ್ದೆ ತಪ್ಪಾಯ್ತು….! ಬುದ್ಧಿ ಹೇಳಿದವನ ಅಪಹರಿಸಿ ಹತ್ಯೆ

ಹುಡುಗಿಯರನ್ನು ಚುಡಾಯಿಸಿ ಬೇಡ ಎಂದು ಬುದ್ಧಿ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

32 ವರ್ಷದ ಸೈಯದ್ ಮನ್ಸೂರ್ ಮೃತಪಟ್ಟ ವ್ಯಕ್ತಿಯಾಗಿದ್ದು, ಈತ ಹುಡುಗಿಯರನ್ನು ಚುಡಾಯಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಜಬಿ ಎಂಬಾತನಿಗೆ ಬುದ್ಧಿವಾದ ಹೇಳಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಒಳಗೊಳಗೆ ಹಗೆ ಸಾಧಿಸುತ್ತಿದ್ದ ಜಬಿ, ಜೈನುಲ್ಲಾ ಎಂಬಾತನೊಂದಿಗೆ ಸೇರಿ ಭಾನುವಾರದಂದು ಸೈಯದ್ ಮನ್ಸೂರ್ ನನ್ನು ಅಪಹರಿಸಿದ್ದ. ಇದೀಗ ಆತನ ಶವ ಪಾಂಡವಪುರ ನಾಲೆಯಲ್ಲಿ ಪತ್ತೆಯಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಎನ್ ಆರ್ ಪುರ ಠಾಣೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular