ಆಹ್ವಾನವಿದ್ದರೂ ಪ್ರಧಾನಿ ಮೋದಿ ಔತಣ ಕೂಟಕ್ಕೆ ಪ್ರಶಾಂತ್ ನೀಲ್ ಗೈರು…! ಇಲ್ಲಿದೆ ಇದರ ಹಿಂದಿನ ಕಾರಣ

ಏರೋ ಇಂಡಿಯಾ 2023 ಉದ್ಘಾಟನೆಗಾಗಿ ಕರ್ನಾಟಕಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದ ವೇಳೆ ಕನ್ನಡ ಚಿತ್ರರಂಗದ ಗಣ್ಯರಿಗಾಗಿ ಔತಣಕೂಟ ಏರ್ಪಡಿಸಿದ್ದರು.

ನಟ ರಾಕಿಂಗ್ ಸ್ಟಾರ್ ಯಶ್, ನಟ – ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜಕುಮಾರ್, ಹೊಂಬಾಳೆಯ ವಿಜಯ್ ಕಿರಂಗದೂರು, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಮಾಜಿ ರೇಡಿಯೋ ಜಾಕಿ ಶ್ರದ್ಧಾ ಜೈನ್ ಅವರುಗಳನ್ನು ಈ ಔತಣಕೂಟಕ್ಕೆ ಆಹ್ವಾನಿಸಲಾಗಿತ್ತು.

ಪ್ರಶಾಂತ್ ನೀಲ್ ಅವರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ಕೂಡ ನರೇಂದ್ರ ಮೋದಿಯವರ ಔತಣಕೂಟದಲ್ಲಿ ಪಾಲ್ಗೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ ಪ್ರಶಾಂತ್ ನೀಲ್ ಅವರ ಗೈರು ಹಾಜರಿ ಕುತೂಹಲ ಮೂಡಿಸಿತ್ತು.

ಅವರ ಗೈರು ಹಾಜರಿ ಹಿನ್ನೆಲೆಯಲ್ಲಿ ಹಲವು ವದಂತಿಗಳು ಹರಿದಾಡಿದ್ದು, ಆದರೆ ಪ್ರಶಾಂತ್ ನೀಲ್ ಅವರ ಆಪ್ತ ಮೂಲಗಳು ಇದೀಗ ಇದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಹೈದರಾಬಾದಿನಲ್ಲಿದ್ದ ಪ್ರಶಾಂತ್ ನೀಲ್ ಜ್ವರದಿಂದ ಬಳಲುತ್ತಿದ್ದರಿಂದ ಔತಣಕೂಟಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read