ಸಿಗ್ನಲ್ ಜಂಪ್ ಮಾಡಿದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿ ಬೀಳದೇ ತಪ್ಪಿಸಿಕೊಳ್ಳಲು ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ಒಂದೂವರೆ ಕಿಲೋ ಮೀಟರ್ ಗುದ್ದಿಕೊಂಡು ಹೋದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ಸಿಗ್ನಲ್ ಜಂಪ್ ಮಾಡಿದ ನಂತರ ಚಾಲಕ ನಿಲ್ಲಿಸದೇ ಪರಾರಿಯಾಗಲು ಪ್ರಯತ್ನಿಸಿದ್ದ. ಜನರು ಪೋಲೀಸ್ ರಕ್ಷಣೆಗೆ ಬಂದು, ಆ ಚಾಲಕನನ್ನು ಹಿಡಿದಾಗ ಹತ್ತೊಂಬತ್ತು ವರ್ಷದ ಆರೋಪಿಯು ಚಾಲನಾ ಪರವಾನಗಿಯನ್ನು ಹೊಂದಿರಲಿಲ್ಲ ಎಂಬುದು ಕಂಡುಬಂದಿದೆ.
ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಾಹನ ನಿಲ್ಲಿಸಿ ವಿಚಾರಿಸಲು ಮುಂದಾಗುತ್ತಿದ್ದಂತೆ ಆ ಚಾಲಕ ವಾಹನ ಮುಂದೆ ಚಲಾಯಿಸಿದ್ದು, ಪೊಲೀಸ್ ಬಾನೆಟ್ ಮೇಲೆ ಬಿದ್ದಿದ್ದು, ಹಾಗೆಯೇ ಸುಮಾರು 1.5 ಕಿಮೀ ಎಳೆದೊಯ್ದಿದ್ದಾನೆ.
ಕಾರಿಗೆ ಉತ್ತರ ಪ್ರದೇಶದ ನಂಬರ್ ಪ್ಲೇಟ್ ಇತ್ತು ಮತ್ತು ಸಿಗ್ನಲ್ ಜಂಪ್ ಮಾಡಿದಾಗ, ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಆತನನ್ನು ನಿಲ್ಲಿಸಲು ಹೇಳಿದ್ದರು. ಪ್ರಕರಣ ದಾಖಲಾಗಿದ್ದು, ಚಾಲಕನ ವಿರುದ್ಧ ಕ್ರಮಕೈಗೊಳ್ಳಲಾಗಿದೆ.