ʼಪ್ರೇಮಿಗಳ ದಿನʼ ದ ಹೆಸರಿನಲ್ಲಿ ನಡೆದಿದೆ ವಂಚನೆ; ನಿಮಗೂ ತಿಳಿದಿರಲಿ ಈ ಮಾಹಿತಿ

ಫೆಬ್ರವರಿ 14 ವಾಲೆಂಟೇನ್ಸ್ ಡೇ. ಪ್ರೇಮಿಗಳ ದಿನಾಚರಣೆ ಆಚರಿಸಲು ಜೋಡಿ ಹೃದಯಗಳು ಕಾಯುತ್ತವೆ. ಆದರೆ ಇದೇ ದಿನದ ಹೆಸರಲ್ಲಿ ವಂಚನೆಯೂ ನಡೆದಿದೆ.

ಆಘಾತಕಾರಿ ಘಟನೆಯೊಂದರಲ್ಲಿ, ಮುಂಬೈನ ಮಹಿಳೆಯೊಬ್ಬರಿಗೆ ಪ್ರೇಮಿಗಳ ದಿನಕ್ಕೆ ಉಡುಗೊರೆ ಕಳುಹಿಸುವ ನೆಪದಲ್ಲಿ ವ್ಯಕ್ತಿಯೊಬ್ಬ ಆಮಿಷ ಒಡ್ಡಿ ನಂತರ 3.68 ಲಕ್ಷ ರೂಪಾಯಿ ವಂಚಿಸಿದ್ದಾರೆ.

51 ವರ್ಷದ ಮಹಿಳೆ ಕಳೆದ ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಅಲೆಕ್ಸ್ ಲೊರೆಂಜೊ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದರು ಎಂದು ಖಾರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಆ ವ್ಯಕ್ತಿ ನಂತರ ಆಕೆಗೆ ವ್ಯಾಲೆಂಟೈನ್ಸ್ ಡೇ ಉಡುಗೊರೆಯನ್ನು ಕಳುಹಿಸಿರುವುದಾಗಿ ತಿಳಿಸಿದ್ದು, ಪಾರ್ಸೆಲ್ ಸ್ವೀಕರಿಸಿದ ನಂತರ ಆಕೆ 750 ಯುರೋಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದನಂತೆ.

ನಂತರ ಆಕೆಗೆ ಕೊರಿಯರ್ ಕಂಪನಿಯಿಂದ ಸಂದೇಶ ಬಂದಿದ್ದು, ಪಾರ್ಸೆಲ್ ಅನುಮತಿಸುವ ಮಿತಿಗಿಂತ ಹೆಚ್ಚು ತೂಕವಿದೆ. ಭಾರವಾಗಿರುತ್ತದೆ, ಹೀಗಾಗಿ ತಾವು ಹೆಚ್ಚುವರಿ 72 ಸಾವಿರ ರೂಪಾಯಿ ಪಾವತಿಸಬೇಕೆಂದು ಕೊರಿಯರ್ ಸೆಂಟರ್ ತಿಳಿಸಿದ್ದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊರಿಯರ್ ಕಂಪನಿಯ ಪ್ರತಿನಿಧಿಗಳು ಎಂದು ಹೇಳಿಕೊಂಡವರು ಮತ್ತೆ ಮಹಿಳೆಯನ್ನು ಸಂಪರ್ಕಿಸಿ ತಮಗೆ ಬಂದಿರುವ ಪಾರ್ಸೆಲ್‌ನಲ್ಲಿ ಯುರೋಪಿಯನ್ ಕರೆನ್ಸಿ ನೋಟುಗಳನ್ನು ಕಂಡುಬಂದಿವೆ. ಮನಿ ಲಾಂಡರಿಂಗ್ ಗಾಗಿ ಶುಲ್ಕ ವಿಧಿಸುವುದನ್ನು ತಪ್ಪಿಸಲು ತಾವು 2,65,000 ರೂ. ಪಾವತಿಸಬೇಕಾಗಿ ಹೇಳಿದ್ದಾರೆ. ಪಾರ್ಸೆಲ್ ಪಡೆಯಲು ಮತ್ತೆ 98,000 ರೂಪಾಯಿ ನೀಡುವಂತೆ ಮಹಿಳೆಯನ್ನು ಕೇಳಿದಾಗ ಆಕೆಗೆ ಅನುಮಾನ ಬಂದಿತ್ತು.

ಆಕೆ ಮೊತ್ತವನ್ನು ಪಾವತಿಸುವುದನ್ನು ನಿಲ್ಲಿಸಿದ ಬಳಿಕ ಆರೋಪಿ ಲೊರೆಂಜೊ ಆಕೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಮತ್ತು ಅವಳ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಳಿಕ ಮಹಿಳೆ ಖಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಭಾನುವಾರ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read