ಸಾರಿಗೆ ಸಂಪರ್ಕಕ್ಕೆಂದು ಹಲವಾರು ವಾಹನಗಳಿವೆ. ನೀರು ತುಂಬಿರೋ ಪ್ರದೇಶದಲ್ಲಿ ವಾಹನಗಳು ಚಲಿಸಲಾಗದೇ ದೋಣಿ ಬಳಸೋದು ಸಾಮಾನ್ಯ. ಆದ್ರೆ ಇಂತಹ ದಾರಿಯಲ್ಲಿ ಜೀವ ತೆಗೆಯೋ ಪ್ರಾಣಿಗಳು ಎದುರಾಗಿಬಿಟ್ರೆ ಹೇಗಾಗುತ್ತೆ?. ಎಂಥವರಿಗೂ ಭಯವಾಗುತ್ತೆ.
ಆದ್ರೆ ಸಾಮಾಜಿಕ ಮಾಧ್ಯಮ ಬಳಕೆದಾರರ ಎದೆ ನಡುಗಿಸುವ ಅಂತಹ ವಿಡಿಯೋವೊಂದು ಇಂಟರ್ನೆಟ್ ನಲ್ಲಿ ಹರಿದಾಡ್ತಿದೆ. ನೂರಾರು ಮೊಸಳೆಗಳಿರುವ ದಾರಿಯಲ್ಲಿ ಪ್ರಾಣವನ್ನ ಪಣಕ್ಕಿಟ್ಟು ಪುಟ್ಟ ದೋಣಿಯಲ್ಲಿ ಸಾಗುವ ವಿಡಿಯೋ ಭಯದ ಜೊತೆಗೆ ಅಚ್ಚರಿ ಮೂಡಿಸಿದೆ.
ವಿಡಿಯೋದಲ್ಲಿ ನದಿಯ ಸಣ್ಣ ಕಿರಿದಾದ ಹಾದಿಯಲ್ಲಿ ಪುಟ್ಟ ದೋಣಿ ಹಾದುಹೋಗುವುದನ್ನು ನೋಡಬಹುದು. ಆದರೆ ಭಯವಾಗುವ ವಿಷಯವೆಂದರೆ ಈ ಪ್ರದೇಶದ ಸುತ್ತಲೂ ನೂರಾರು ಬೃಹತ್ ಮೊಸಳೆಗಳಿವೆ. ದೋಣಿ ಸ್ವಲ್ಪ ಪಲ್ಟಿ ಹೊಡೆದರೆ ಅಥವಾ ತಿರುಗಿದರೆ, ದೋಣಿಯಲ್ಲಿದ್ದವರ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಭಯಾನಕವಾಗಿರುವ ಈ ವಿಡಿಯೋ ನೋಡಿದ ಹಲವರು ಇಂತಹ ಹಾದಿಯಲ್ಲಿ ಹೋಗದಿರುವುದು ಉತ್ತಮ. ಅಥವಾ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದಿದ್ದಾರೆ .
https://twitter.com/OTerrifying/status/1623720884904263680?ref_src=twsrc%5Etfw%7Ctwcamp%5Etweetembed%7Ctwterm%5E1623720884904263680%7Ctwgr%5Eec06ddfa9c9336b63ddfd8c8f9d54a660e4394f8%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Findiac2390847183200-epaper-dhf6af4a9befa548589eba0f15b9db5a4f%2Fboatpassesthroughnarrowpassagewithhundredsofcrocodilesaroundscaryvideogoesviral-newsid-n471031580