ಪ್ರಸ್ತುತ ವಿಧಾನ ಸಭೆಯ ಕೊನೆ ಅಧಿವೇಶನ ಈಗ ನಡೆಯುತ್ತಿದ್ದು, ಫೆಬ್ರವರಿ ನಾಲ್ಕನೇ ವಾರದಲ್ಲಿ ಕೊನೆಗೊಳ್ಳಲಿದೆ. ಇದರ ಮಧ್ಯೆಯೂ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಮೂರೂ ಪ್ರಮುಖ ಪಕ್ಷಗಳ ನಾಯಕರು ರಾಜ್ಯದ ಉದ್ದಗಲಕ್ಕೂ ಪ್ರವಾಸ ನಡೆಸುತ್ತಿದ್ದಾರೆ.
ಇದರ ಜೊತೆಗೆ ಪಕ್ಷಾಂತರ ಪರ್ವವೂ ಆರಂಭವಾಗಲಿದ್ದು, ಕೆಲ ಹಾಲಿ ಶಾಸಕರುಗಳು ತಮ್ಮ ತಮ್ಮ ಪಕ್ಷ ತೊರೆದು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳಲು ವಿಧಾನಸಭಾ ಅಧಿವೇಶನ ಕೊನೆಗೊಳ್ಳುವುದನ್ನೇ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಪೈಕಿ ಶಾಸಕರುಗಳಾದ ಗುಬ್ಬಿ ಶ್ರೀನಿವಾಸ್, ಕೋಲಾರ ಶಾಸಕ ಶ್ರೀನಿವಾಸ ಗೌಡ, ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಮಾರ್ಚ್ ಮೊದಲ ವಾರದಲ್ಲಿ ತಮ್ಮ ನಿರ್ಧಾರ ಪ್ರಕಟಿಸಬಹುದು ಎನ್ನಲಾಗಿದೆ.
ಇನ್ನೂ ಹಲವು ಶಾಸಕರುಗಳು ತಮ್ಮ ಮಾತೃ ಪಕ್ಷ ತೊರೆದು ಮತ್ತೊಂದು ಪಕ್ಷ ಸೇರ್ಪಡೆಗೊಳ್ಳಲು ಚಿಂತನೆ ನಡೆಸಿದ್ದು, ವಿಧಾನಸಭಾ ಅಧಿವೇಶನ ಮುಗಿದ ಬಳಿಕ ಕೆಲವೊಂದು ಅಚ್ಚರಿಯ ನಡೆಗಳು ಕಂಡು ಬರಬಹುದು ಎಂದು ಹೇಳಲಾಗಿದೆ.